ಒಂದೇ ಕಾಮಗಾರಿಗೆ ಮೂರು ಬಾರಿ ಅನುದಾನ ಬಿಡುಗಡೆ

ದಾವಣಗೆರೆ, ಡಿ.20- ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಹಾಲಿವಾಣ ಗ್ರಾಮದಲ್ಲಿ ಒಂದೇ ಕಾಮಗಾರಿಗೆ ಮೂರು ಬಾರಿ ಅನುದಾನ ಪಡೆಯುವ ಮೂಲಕ ಭ್ರಷ್ಟಾಚಾರ ಮಾಡಲಾಗಿದ್ದು, ಈ ಬಗ್ಗೆ. ಕೂಡಲೇ ತನಿಖೆ ನಡೆಸುವಂತೆ  ಗ್ರಾಮದ ಮುಖಂಡ ಪ್ರಕಾಶ್ ಎಸ್. ಬನ್ನೇರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಚಿಕ್ಕಹಾಲಿವಾಣ ಗ್ರಾಮದ ತಳವಾರ ಈರಪ್ಪರ ಜಮೀನಿನಿಂದ ತಿಪ್ಪಾನಾಯ್ಕರ ಜಮೀನಿನವರೆಗೆ ರಸ್ತೆ ಅಭಿವೃದ್ಧಿಪಡಿಸಲು 5 ಲಕ್ಷ ರೂ. ವೆಚ್ಚದಲ್ಲಿ ದಿನಾಂಕ 28.01.2017 ಕ್ಕೆ ಪ್ರಾರಂಭಿಸಿ, 11.02-2017 ರಂದು ಮುಕ್ತಾಯ ಮಾಡಲಾಗಿದ್ದ ಕಾಮಗಾರಿಗೆ ಪುನ: ಅನುದಾನ ಪಡೆಯಲಾಗಿದೆ. ಇದೇ ಕಾಮಗಾರಿಗೆ ಶಾಸಕ ಎಂ.ಪಿ. ರೇಣು ಕಾಚಾರ್ಯ ಅವರ ಅನುದಾನದಲ್ಲಿ 5 ಲಕ್ಷ ರೂ. ಗಳನ್ನು ಪಡೆಯುವ ಮೂಲಕ ವಂಚಿಸಲಾಗಿದೆ ಎಂದು ದೂರಿದರು.

ಈ ಬಗ್ಗೆ ನ್ಯಾಯ ಕೇಳಲು ಹೋದ ನಮ್ಮ ಮೇಲೆ ಗ್ರಾ.ಪಂ. ಸದಸ್ಯರಾದ ರಮೇಶನಾಯ್ಕ ಮತ್ತು ಸಂಗಡಿಗರಾದ ಕೇಶವಮೂರ್ತಿ, ಪಂಚಯ್ಯ ಅವರು ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್. ಹನುಮಂತಪ್ಪ, ಹೆಚ್. ಲಕ್ಷ್ಮಪ್ಪ, ಬಿ.ಕೆ. ಬಸವರಾಜಪ್ಪ ಉಪಸ್ಥಿತರಿದ್ದರು.

error: Content is protected !!