ವಿಜಯಪುರ- ಮಂಗಳೂರು ರೈಲು ಪುನರಾರಂಭ
ದಾವಣಗೆರೆ, ಡಿ. 2- ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಸ್ಥಗಿತ ಗೊಂಡಿದ್ದ ವಿಜಯಪುರ-ಮಂಗಳೂರು ರೈಲು (ರೈಲು ಗಾಡಿ ಸಂಖ್ಯೆ 07377-07378) ಡಿಸೆಂಬರ್ 1 ರಿಂದ ಪುನರಾರಂಭಗೊಂಡಿರುವುದು ದಾವಣಗೆರೆ ಮತ್ತು ಕರಾವಳಿ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ತುಂಬಾ ಅನು ಕೂಲವಾಗಿದೆ ಎಂದು ದಾವಣಗೆರೆ – ಕರಾವಳಿ ರೈಲು ಹೋರಾಟ ಸಮಿತಿಯ ಅಧ್ಯಕ್ಷ ನಿರ್ಮಲ್ ರಾಜೇಂದ್ರ ಬಂಗೇರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ರೈಲು ಮಧ್ಯ ರಾತ್ರಿ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದಾಗ, ರೈಲು ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ರೈಲಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಅವರು ಮಾತನಾಡಿದರು. ರೈಲ್ವೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಸದರಿ ರೈಲು ಮುಂಜಾನೆ 6-7 ಘಂಟೆಗೆ ಮಂಗಳೂರು ತಲುಪುವ ಹಾಗೆ ಸಮಯ ಬದಲಾವಣೆ ಮಾಡಬೇಕು. ರೈಲು ಮಾರ್ಗವನ್ನು ಮಂಗಳೂರಿ ನಿಂದ ಕುಂದಾಪುರದವರೆಗೆ ವಿಸ್ತರಣೆ ಮಾಡಬೇಕು ಎನ್ನುವ ಹೋರಾಟ ಸಮಿತಿಯ ಹೋರಾಟ ಮುಂದುವ ರೆಸಲಾಗುವುದು ಎಂದು ಕೆ.ರಾಘವೇಂದ್ರ ನಾಯರಿ ತಿಳಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಬಸವರಾಜ ಗಂಗೋತ್ರಿ, ರವೀಂದ್ರ ಸಾಣೂರು, ಆರ್.ಆಂಜನೇಯ, ಜಂಗ್ಲಿ ಶಿವು, ಮಂಜು, ಯಶವಂತ್, ರವಿಚಾರ್ಯ, ಪೂಜಾರಿ ಮಧು ಸೂದನ್ ಹಾಗೂ ಮತ್ತಿತರರು ಹಾಜರಿದ್ದರು.