ದಾವಣಗೆರೆ, ಸೆ.7- ಯಾರೇ ಸಿಎಂ ಆಗಲಿ ಅವರ ನೇತೃತ್ವದಲ್ಲೇ ಚುನಾವಣೆ ಆಗೋದು. ಸಿಎಂ ಇದ್ದಾರೆ ಎಂದ ಮೇಲೆ ಅವರ ನೇತೃತ್ವದಲ್ಲೇ ಮುಂಬರುವ ಚುನಾವಣೆಗೆ ಹೋಗಬೇಕು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಲಹೆ ಮಾರ್ಗದರ್ಶನ ತೆಗೆದುಕೊಂಡು ಬಸವರಾಜ ಬೊಮ್ಮಾಯಿ ಚುನಾವಣೆ ಎದುರಿಸಲಿ ಎಂದು ಬಿಜೆಪಿ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಚೂಣಿ ನಾಯಕರಾಗಿ ದ್ದಾರೆ. ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಬೇಕಲ್ಲವೇ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆಯೇ ? ಎಂಬ ಪ್ರಶ್ನೆಗೆ, ಯಡಿಯೂರಪ್ಪ ಅವರು ಹಿರಿಯರು, ಇದುವರೆಗೂ ಕೆಲಸ ಮಾಡಿದ್ದವರು. ಅಷ್ಟೇ ಅಲ್ಲದೇ ರಾಜ್ಯದ ಬಗ್ಗೆ ಹೆಚ್ಚಾಗಿ ಗೊತ್ತಿರುವ ವ್ಯಕ್ತಿ. ಅವರ ಸಲಹೆ, ಮಾರ್ಗದರ್ಶನದಲ್ಲಿ ಏನು ಹೇಳುತ್ತಾರೆ ಅದನ್ನೆಲ್ಲಾ ಕೇಳಿಯೇ ನಾವೆಲ್ಲರೂ ಕೆಲಸ ಮಾಡುತ್ತೇವೆ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು.
ಸಿಎಂ ಅಂದ ತಕ್ಷಣ ಎಲ್ಲಾ ವಿಚಾರ ದಲ್ಲೂ ಪಂಡಿತರಾಗಿ ಇರಲ್ಲ. ಕಾರ್ಯಕ ರ್ತರ ಕಷ್ಟ, ಸಲಹೆ ಸ್ವೀಕಾರ ಮಾಡಿ ಚುನಾವಣೆ ಎದುರಿಸಬೇಕು ಎಂದರು.