ಡಾ.ಅನಿತಾ ಹೆಚ್.ದೊಡ್ಡಗೌಡರ್‌ಗೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಗೌರವ

ಡಾ.ಅನಿತಾ ಹೆಚ್.ದೊಡ್ಡಗೌಡರ್‌ಗೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಗೌರವ - Janathavaniದಾವಣಗೆರೆ, ನ.28- ಜಿಲ್ಲಾಡಳಿ ತದಿಂದ ಈಚೆಗೆ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿನ ಸೇವೆಯನ್ನು ಪರಿಗಣಿಸಿ, ನಗರದ ಎಸ್‌.ಎಸ್‌.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಹೆಚ್. ದೊಡ್ಡಗೌಡರ್ ಅವರನ್ನು ರಾಜ್ಯೋತ್ಸವದ ಗೌರವ ಪುರಸ್ಕಾರ ನೀಡುವುದರ ಮೂಲಕ ಸನ್ಮಾನಿಸಲಾಯಿತು.

ವಿವಿಧ ವಿಷಯಗಳ ಕುರಿತಂತೆ ಅನೇಕ ಲೇಖನಗಳನ್ನು ಅವರು ಬರೆಯುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಶಾಲಾ-ಕಾಲೇಜು, ವಿವಿಧ ಸಮಾರಂಭಗಳಲ್ಲಿ ಉಪನ್ಯಾಸ ನೀಡುತ್ತಿದ್ದಾರೆ. ಅನಿತಾ ಅವರ ಸೇವೆಯನ್ನು ಗುರುತಿಸಿ, ನಗರ ಪಾಲಿಕೆಯು ಕರ್ನಾಟಕ ರಾಜ್ಯೋತ್ಸವ ಪುರಸ್ಕಾರವನ್ನು ನೀಡಿದೆ. ಹಲವಾರು ಸಂಘ – ಸಂಸ್ಥೆಗಳಿಂದ ಗೌರವಕ್ಕೆ ಭಾಜನರಾಗಿದ್ದಾರೆ.

error: Content is protected !!