ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ ಪರೀಕ್ಷೆ
ದಾವಣಗೆರೆ,ನ.22- ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇವರು ಪ್ರತಿ ವರ್ಷವೂ ನಡೆಸುವ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್ ಮೆಂಟ್ ಕೋರ್ಸ್ ಪರೀಕ್ಷೆಯಲ್ಲಿ ನಗರದ ಪ್ರತಿಷ್ಟಿತ ಬಾಪೂಜಿ ಕೋ ಆಪರೇಟಿವ್ ಬ್ಯಾಂಕ್ ನ 9 ಜನ ಉದ್ಯೋಗಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಲ್ಲದೇ ಏಳು ಜನ ಪ್ರಥಮ ದರ್ಜೆಯಲ್ಲಿ, ಒಂಭತ್ತು ಜನ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೆೋಂದಿದ್ದಾರೆ. ಬ್ಯಾಂಕಿನ ಆಡಳಿತ ಕಚೇರಿ ವ್ಯವಸ್ಥಾಪಕ ಎಂ.ಬಸವರಾಜ್ ಶೇ. 82.67 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಪಡೆದಿರುತ್ತಾರೆ.
ಉಳಿದಂತೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾದವರು : ಜ್ಯೋತಿಶ್ರೀ ಹೆಚ್.ಸಿ. (ಶೇ.78.67), ಸುಷ್ಮಾ ಎಂ. (ಶೇ.76.17), ಅನುಷಾ ಕೆ.ವಿ. (ಶೇ.76), ಕವಿತಾ ಎನ್.ಎಂ. (ಶೇ.75), ಸಂತೋಷ್ ಹೆಚ್.ಎಂ. (ಶೇ.73.67), ಜಿತೇಂದ್ರಕುಮಾರ್ ಕೆ.ಎಲ್. (ಶೇ.73.67), ಸುಮಾ ರಾಜೇಶ್ (ಶೇ.72.50), ಸಂಕೇತ್ ಕೆ.ಶಾಮನೂರು (ಶೇ.70.67).
ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರು : ಆಶಾ ಎ.ಜೆ. (ಶೇ.68.50), ಉಷಾ ಕೆ.ಬಿ. (ಶೇ.67.33), ಶ್ವೇತಾ ಎ.ವಿ. (ಶೇ.67.33), ರಾಜೇಶ್ ಪವಾರ್ ಎನ್. (ಶೇ.66.67), ಕೆೋಟ್ಟೂರು ಸ್ವಾಮಿ ಸಿ.ಬಿ. (ಶೇ.64.50), ರಾಜಶೇಖರಪ್ಪ ಜಿ.ಕೆ. (ಶೇ.61), ತೇಜಸ್ವಿನಿ ಹೆಚ್.ಪಿ. (ಶೇ.61).
ರಮೇಶ್ ಡಿ.ಎಸ್., ನವೀನ್ ಕೆ.ಎನ್., ಮಂಜುನಾಥ ಬಿ.ಎಸ್., ವೀರಣ್ಣ ಟಿ., ಪ್ರಣೀತ್ ಕುಮಾರ್ ಕೆ.ಎಂ., ಚಂದ್ರಶೇಖರ್ ಎಸ್., ಶಿವಕುಮಾರಯ್ಯ ಪಿ., ಗಂಗಮ್ಮ ಕೆ.ಎಂ. ಮತ್ತು ಮನೋಹರ್ ಜಿ. ಅವರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೆೋಂದಿದ್ದಾರೆ.
ತೇರ್ಗಡೆ ಹೆೋಂದಿದ ಈ ಎಲ್ಲ ನೌಕರರನ್ನು ವೆೋನ್ನೆ ಜರುಗಿದ ಬಾಪೂಜಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರೂ ಆದ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಬ್ಯಾಂಕಿನ ಎಲ್ಲ ನಿರ್ದೇಶಕರುಗಳು ಮತ್ತು ಪ್ರಧಾನ ವ್ಯವಸ್ಥಾಪಕ ಜಿ.ವಿ.ಶಿವಶಂಕರ್ ತೇರ್ಗಡೆ ಹೆೋಂದಿದ ಎಲ್ಲ ಉದ್ಯೋಗಿಗಳನ್ನು ಅಭಿನಂದಿಸಿದ್ದಾರೆ.