ಮೆಕ್ಕೆಜೋಳ ರೈತರಿಗೆ 2500 ರೂ. ಪ್ರೋತ್ಸಾಹ ಧನ ಘೋಷಿಸಲು ಮನವಿ

ದಾವಣಗೆರೆ, ಆ.19- ಮೆಕ್ಕೆಜೋಳ ಬೆಳೆದಿರುವ ರೈತರಿಗೆ 2,500 ರೂಪಾಯಿಗಳನ್ನು ಪ್ರೋತ್ಸಾಹ ಧನವೆಂದು ಘೋಷಿಸಲು ಕೇಂದ್ರದ ಕೃಷಿ ಸಚಿವರು ಹಾಗೂ ಪ್ರಧಾನಿಗಳಲ್ಲಿ ಪ್ರಸ್ತಾಪಿಸುವಂತೆ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ಪ್ರದೇಶ ರೈತ ಸಂಘ ಮನವಿ ಮಾಡಿದೆ.

ಕಳೆದ ಸಾಲಿನಲ್ಲಿ ಮೆಕ್ಕೆಜೋಳವನ್ನು ರೈತರು ಬೆಳೆದು ಪ್ರತಿ ಕ್ವಿಂಟಾಲ್‌ಗೆ ಕೇವಲ 1300 ರೂ.ಗೆ ಮಾರಾಟ ಮಾಡಿ, ಅಪಾರ ನಷ್ಟಕ್ಕೆ ಗುರಿಯಾಗಿದ್ದಾರೆ. ಕೊನೆಗೆ ಮೆಕ್ಕೆಜೋಳ ಊಟದ ಧಾನ್ಯವಲ್ಲ ಎಂಬ ಹಣೆಪಟ್ಟಿ ಹಚ್ಚಿ, ಬೆಂಬಲ ಬೆಲೆ ಘೋಷಣೆಯಾಗಲೇ ಇಲ್ಲ. ಈಗ ನೋಡಿದರೆ ದೊಡ್ಡ ದೊಡ್ಡ ವರ್ತಕರಿಗೆ ಲಾಭ ಬರುವಂತೆ ಪ್ರತಿ ಒಂದು ಕ್ವಿಂಟಾಲ್‌ಗೆ 2300 ರೂ. ಮತ್ತು ಹೆಚ್ಚಿನ ಬೆಲೆ ಆಗಿದ್ದು ರೈತರೆಲ್ಲರೂ ಹತಾಶೆಗೊಳಗಾಗಿದ್ದಾರೆ.

ಕರಂದ್ಲಾಜೆ ಅವರು ಕೇಂದ್ರದ ಮಂತ್ರಿಗಳಿಗೆ ಒತ್ತಾಯ ಹೇರಿ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಿಸಬೇಕಾಗಿ ಕರ್ನಾಟಕದ ರೈತರ ಪರವಾಗಿ ಪ್ರಾರ್ಥಿಸುವುದಾಗಿ ಸಂಘದ ಅಧ್ಯಕ್ಷ ಎಂ.ಎಸ್‌.ಕೆ. ಶಾಸ್ತ್ರಿ ಪ್ರಾರ್ಥಿಸಿದ್ದಾರೆ.

error: Content is protected !!