ಕರಾಳ ಕೃಷಿ ಮಸೂದೆಗಳ ವಾಪಸ್ ಸ್ವಾಗತಾರ್ಹ

ದಾವಣಗೆರೆ, ನ.21- ದೇಶದ ರೈತರ ಮೇಲೆ ವಿಧಿಸಿದ್ದ ಮೂರು ಕರಾಳ ಕೃಷಿ ಮಸೂದೆಗಳನ್ನು ವಾಪಸ್‌ ಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ ಸ್ವಾಗತಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ರೈತರು ಸತತ 16 ತಿಂಗಳ ಕಾಲ ಮನೆ – ಮಠ ತೊರೆದು ಚಳಿ, ಮಳೆ, ಬಿಸಿ ಲನ್ನೂ ಲೆಕ್ಕಿಸದೇ ದೆಹಲಿ ಯಲ್ಲಿ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.

ರೈತರ ಹೋರಾಟಕ್ಕೆ ದೇಶದ ಎಲ್ಲಾ ರಾಜ್ಯಗಳ ವಿರೋಧ ಪಕ್ಷದವರು ಬೆಂಬಲವನ್ನು ನೀಡಿದ್ದರು. ಈ ಹೋರಾಟದ ಮುಂಚೂಣಿಯಲ್ಲಿದ್ದ ಪಂಜಾಬ್, ಹರಿಯಾಣ ರಾಜ್ಯಗಳ ರೈತರುಗಳಿಗೆ ಈ ಕೀರ್ತಿ ಸಲ್ಲುತ್ತದೆ.

ಶೀಘ್ರದಲ್ಲೇ ಬರಲಿರುವ ಪಂಜಾಬ್, ಹರಿಯಾಣ ಸೇರಿದಂತೆ ಪಂಚ ರಾಜ್ಯಗಳ‌ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕೈ ತಪ್ಪುವ ಭೀತಿ ಮತ್ತು ಈಗಾಗಲೇ ದೇಶದ ಕೆಲ ರಾಜ್ಯಗಳಲ್ಲಿ ನಡೆದ ಉಪ‌ ಚುನಾವಣೆಗಳಲ್ಲಿ ಮತದಾರರು ನೀಡಿದ ತೀರ್ಪಿನಿಂದ‌ ಬೆದರಿ ಕೇಂದ್ರ ಸರ್ಕಾರ ಕಾಯಿದೆಗಳನ್ನು ಹಿಂಪಡೆದಿದೆ. ಇದಕ್ಕೂ ಮೊದಲೇ ಸರ್ಕಾರ ಈ ನಿರ್ಧಾರ ಕೈ ಗೊಳ್ಳಬಹುದಿತ್ತು ಎಂದು ಅವರು ತಿಳಿಸಿದ್ದಾರೆ.

ಕಾಯಿದೆಗಳನ್ನು ವಿರೋಧಿಸಿ, ದೇಶದ ಎಲ್ಲಾ ರಾಜ್ಯಗಳ ರೈತರು ಛಲ ಬಿಡದೇ ನಡೆಸಿದ ಉಪವಾಸ ಸತ್ಯಾಗ್ರಹ, ಬಲಿದಾನಗಳ ಮೂಲಕ ರೈತರ ಹಕ್ಕನ್ನು ಪಡೆದು ಕೊಳ್ಳಬಹುದು ಎಂಬುದನ್ನು ಈ ಹೋರಾಟ ತೋರಿಸಿಕೊಟ್ಟಿದೆ ಈ ದಿನ ದೇಶದ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯತ್ತದೆ ಎಂದು ಗಣೇಶ್ ದಾಸಕರಿಯಪ್ಪ ತಿಳಿಸಿದ್ದಾರೆ.

error: Content is protected !!