354.65 ಕೋ. ರೂ. ಕ್ರಿಯಾ ಯೋಜನೆಗೆ ಅನುಮೋದನೆ

ದಾವಣಗೆರೆ, ಆ.17- ಜಿಲ್ಲಾ ಪಂಚಾಯ್ತಿಯ 2021-22 ನೇ ಸಾಲಿಗೆ 354.65 ಕೋಟಿ ರೂ. ಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆಗೆ ಗುರುವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಿ.ಪಂ. ಕಾರ್ಯಕ್ರಮಗಳಡಿ 354.65 ಕೋಟಿ ರೂ., ತಾ.ಪಂ. ಕಾರ್ಯಕ್ರಮಗಳಡಿ 716.87 ಕೋಟಿ ರೂ., ಗ್ರಾ.ಪಂ.  ಕಾರ್ಯಕ್ರಮಗಳಡಿ 35 ಲಕ್ಷ ರೂ. ಸೇರಿದಂತೆ ಒಟ್ಟಾರೆ ಈ ವರ್ಷ ಜಿಲ್ಲೆಗೆ 1,071.88 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು, ಇದರಲ್ಲಿ ಜಿ.ಪಂ.ಗೆ  ನಿಗದಿಪಡಿಸಿರುವ 354.65 ಕೋಟಿ ರೂ. ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.

ಹಂಚಿಕೆ ಮಾಡಲಾಗಿರುವ ಅನುದಾನದ ಪೈಕಿ ಸಾಮಾನ್ಯ ಶಿಕ್ಷಣ ವಲಯಕ್ಕೆ 160.27 ಕೋಟಿ ರೂ. ಗಳ ಅನುದಾನ ಅಂದರೆ ಶೇ. 45.19 ರಷ್ಟು ಅನುದಾನ ನಿಗದಿಪಡಿಸಲಾಗಿದೆ.  ವೈದ್ಯಕೀಯ ಮತ್ತು ಜನಾರೋಗ್ಯ ವಲಯಕ್ಕೆ 47.32 ಕೋಟಿ ರೂ., ಕುಟುಂಬ ಕಲ್ಯಾಣ 24.52 ಕೋಟಿ, ಪರಿಶಿಷ್ಟ ಜಾತಿ ಕಲ್ಯಾಣ 25.64 ಕೋಟಿ, ಪರಿಶಿಷ್ಟ ಪಂಗಡ ಕಲ್ಯಾಣ-10.72 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ-37.03 ಕೋಟಿ ರೂ. ಸೇರಿದಂತೆ, 30 ವಿವಿಧ ಒಟ್ಟು ವಲಯಗಳಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮೀಸಲಿಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತಿಗೆ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿ 5.41 ಕೋಟಿ ರೂ. ಗಳ ಅನುದಾನದ ವಿವಿಧ ಕಾರ್ಯಕ್ರಮಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದೇ ವೇಳೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ರೂಪಿಸಲಾದ ಜಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ,  ಕೇವಲ ಜಲ್ಲಿ ಹಾಕಿ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದು ಯೋಜನೆ ರೂಪಿಸಿರುವುದು ಸರಿಯಲ್ಲ, ರಸ್ತೆಗಳ ಸಂಖ್ಯೆ ಕಡಿಮೆಯಾದರೂ ಚಿಂತೆಯಿಲ್ಲ, ರಸ್ತೆಗಳನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಿದರೆ ಚೆನ್ನಾಗಿರುತ್ತದೆ.  ಹೀಗಾಗಿ ಜಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದಿಲ್ಲ, ರಸ್ತೆಯನ್ನು ಡಾಂಬರೀಕರಣಗೊಳಿಸುವ ಪರಿಷ್ಕೃತ ಯೋಜನೆ ರೂಪಿಸಿ, ಅನುಮೋದನೆಗೆ ಸಲ್ಲಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿ.ಪಂ.ಗೆ ಒದಗಿಸಲಾದ 15 ನೇ ಹಣಕಾಸು ಅನುದಾನದಡಿ 325.53 ಲಕ್ಷ ರೂ. ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಗೂ ಅನುಮೋದನೆ ನೀಡಲಾಯಿತು. 

ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲಿಯೇ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಡಿಸೆಂಬರ್ ಒಳಗೆ ನಿಗದಿಪಡಿಸಿದ ಕಾಮಗಾರಿ  ಹಾಗೂ ಕಾರ್ಯಕ್ರಮಗಳಿಗೆ ಅನುದಾನ ವೆಚ್ಚ ಮಾಡಿದಲ್ಲಿ, ಮಾರ್ಚ್ ವೇಳೆಗೆ ಇನ್ನಷ್ಟು ಹೆಚ್ಚುವರಿ ಅನುದಾನ ಲಭ್ಯವಾಗುತ್ತದೆ.  ಅಧಿಕಾರಿಗಳು ಯಾವುದೇ ನೆಪ ಹೇಳದೆ, ಕ್ರಿಯಾ ಯೋಜನೆಯಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದ

error: Content is protected !!