ಪಡಿತರಕ್ಕೆ ಬೆರಳಚ್ಚು ಗುರುತು : ನಗರದಲ್ಲಿ ಪ್ರತಿಭಟನೆ

 ಸ್ಲಂ ಜನಾಂದೋಲನ ಕರ್ನಾಟಕ ನೇತೃತ್ವದಲ್ಲಿ ಖಂಡನೆ

ದಾವಣಗೆರೆ, ಆ.17- ಪಡಿತರ ವ್ಯವಸ್ಥೆಯಲ್ಲಿ ಆಹಾರ ಧಾನ್ಯ ನೀಡಲು ಬಿಪಿಎಲ್ ಕುಟುಂಬಗಳ ಸದಸ್ಯರ ಬೆರಳಚ್ಚು ಗುರುತು ಪಡೆದುಕೊಳ್ಳುತ್ತಿರುವು ದನ್ನು ಖಂಡಿಸಿ ಮತ್ತು ವಿದ್ಯುತ್ ಕಾಯ್ದೆ-2020 ಅನ್ನು ವಿರೋಧಿಸಿ ಸ್ಲಂ ಜನಾಂದೋಲನ ಕರ್ನಾ ಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಿಂದ ಬಡ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಸಂವಿಧಾನ ವಿರೋಧಿ ನಡೆಯಿಂದ ದೇಶದ ಜನಸಾಮಾನ್ಯರಿಗೆ ಅಗತ್ಯವಿರುವ ಯೋಜನೆಗಳನ್ನು ಕೈ ಬಿಟ್ಟು ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿ ದೇಶದ ಎಲ್ಲಾ ಸೇವಾ ವಲಯಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಬಡ ಜನರಿಗೆ, ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದೆ ಎಂದು ಸಂಘಟನೆಯ ಅಧ್ಯಕ್ಷೆ ಶಾಹಿನಾ ಬೇಗಂ ಆರೋಪಿಸಿದರು.

ಇತ್ತೀಚಿಗೆ ರಾಜ್ಯ ಸರ್ಕಾರ ಆಹಾರ ಇಲಾಖೆಯಿಂದ ಬಿಪಿಎಲ್ ಪಡಿತರ ಕುಟುಂಬಗಳು ತಮ್ಮ ಬೆರಳಚ್ಚು ಗುರುತುಗಳನ್ನು ನೀಡಿ ಪಡಿತರ ಪಡೆಯುವುದನ್ನು ಕಡ್ಡಾಯ ಗೊಳಿಸಿರುವುದರಿಂದ ರಾಜ್ಯದ ಬಿಪಿಎಲ್ ಪಡಿತರ ಕುಟುಂಬಗಳು ಉದ್ಯೋಗಕ್ಕಾಗಿ ಇತರೆ ಪ್ರದೇಶಗಳಿಗೆ ತೆರಳಿರುವುದರಿಂದ ಆಹಾರ ಪದಾರ್ಥ ಪಡೆಯಲು ಹರಸಾಹಸಪಡು ವಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಜನವಿರೋಧಿ ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡಬೇಕು ಎಂದು ಗೌರವಾಧ್ಯಕ್ಷ ಶಬ್ಬೀರ್ ಸಾಬ್ ಒತ್ತಾಯಿಸಿದರು.

ರಾಜ್ಯದಲ್ಲಿ ಯಾವುದೇ ನೆಪದಲ್ಲಿ ಬಡವರ ಆಧಾರ ಸ್ತಂಭವಾಗಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಬಾರದು. ಬಿಪಿಎಲ್ ಪಡಿತರ ಚೀಟಿಗೆ ನೀಡಲಾಗಿರುವ ಆಹಾರ ಧಾನ್ಯಗಳನ್ನು ನಿಲ್ಲಿಸಬಾರದು. ಪಡಿತರ ಚೀಟಿಗಾಗಿ ನಿಗದಿಗೊಳಿಸಿರುವ ಮಾನದಂಡಗಳು, ಲಕ್ಷಾಂತರ ಪಡಿತರ ಚೀಟಿಯನ್ನು ರದ್ದುಗೊಳಿಸುವ ಹುನ್ನಾರ ಕೈ ಬಿಡಬೇಕು ಎಂದು ಪ್ರಧಾನ ಕಾರ್ಯದರ್ಶಿ ರೇಣುಕಮ್ಮ ಹಾವೇರಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾವಿತ್ರಮ್ಮ, ಸಂಘಟನಾ ಕಾರ್ಯದರ್ಶಿ ಸುಹಿಲ್ ಬಾಷಾ, ಮಂಜುಳಾ, ಯೂಸೂಫ್‌ ಸಾಬ್, ಅಫ್ಜಲ್ ಬೇಗ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!