ದಾವಣಗೆರೆ, ಮಾ.29- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ನಿನ್ನೆ ನಗರದ ಕುವೆಂಪು ಕನ್ನಡ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ `ದಾವಣಗೆರೆ ಗೃಹಿಣಿ ಸ್ಪರ್ಧೆ-2021’ರ ಫಲಿತಾಂಶ ಈ ಕೆಳಗಿನಂತಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.
ಪ್ರಥಮ ಸ್ಥಾನ ಶ್ರೀಮತಿ ಸುನಂದ ಜಂಬನಗೌಡ, ದ್ವಿತೀಯ ಸ್ಥಾನ ಶ್ರೀಮತಿ ಶೈಲಾ ವಿನೋದ್ ದೇವರಾಜ್, ತೃತೀಯ ಸ್ಥಾನ ವೀಣಾ ರವಿಕುಮಾರ್, ವಿಜೇತರಿಗೆ ದಾವಣಗೆರೆಯ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ವಿಜೇತ ಪಟ್ಟಿ, ತಲೆಯ ಮೇಲೆ ಕಿರೀಟ ಧಾರಣೆಯೊಂದಿಗೆ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಉದ್ಯಮದ ಸೀರೆ ಉಡುಗೊರೆಯೊಂದಿಗೆ ಸ್ಥಾನಗಳನ್ನು ಘೋಷಿಸಿ, ಪ್ರಶಸ್ತಿ ವಿತರಿಸಲಾಯಿತು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ಚಪ್ಪರದಹಳ್ಳಿಮಠ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಮುಂಡರಗಿಯ ಈಶ್ವರಿ ಮಹಿಳಾ ಫೌಂಡೇಶನ್ ಸಂಸ್ಥಾಪಕರಾದ ಪ್ರಭಾವತಿ ವಿಶ್ವನಾಥ್ ಬೆಳವಣಕಿಮಠ, ನಾಡಿನ ಹಿರಿಯ ಸಾಹಿತಿಗಳು, ಪರಿಸರವಾದಿಗಳು, ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಶಾಂತಾ ಭಟ್, ಶ್ರೀಮತಿ ಚಂದ್ರಶೇಖರ ಅಡಿಗ, ಕುಸುಮಾ ಲೋಕೇಶ್, ರೇಖಾ ಓಂಕಾರಪ್ಪ, ಶ್ರೀಲಕ್ಷ್ಮಿ ಆಂಜನೇಯ, ಮಮತಾ ನಾಗರಾಜ್, ಶಾರದಮ್ಮ ಶಿವನಪ್ಪ, ಸಾವಿತ್ರಿ ಜಗದೀಶ್, ಮಂಜುಳಾ ಸುನೀಲ್, ಭಾಗ್ಯ ಭಾಸ್ಕರ್ನಾಯಕ್, ಶೈಲಾ ವಿಜಯಕುಮಾರ್, ವಸಂತಿ ಮಂಜುನಾಥ್, ಜ್ಯೋತಿ ಗಣೇಶ್ಶೆಣೈ, ನಿರ್ಮಲಾ ರಾಜೇಂದ್ರಬಾಬು, ಪ್ರಭಾ ರವೀಂದ್ರ ಮುಂತಾದವರು ಪಾರದರ್ಶಕವಾಗಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು ಎಂದು ಕಲಾಕುಂಚ ಎಸ್.ಎಸ್. ಬಡಾವಣೆ ಶಾಖೆಯ ಅಧ್ಯಕ್ಷರಾದ ಸುಜಾತ ಬಸವರಾಜ್ ತಿಳಿಸಿದ್ದಾರೆ.