ಮಹಾನಗರ ಪಾಲಿಕೆಯ ಸಿಬ್ಬಂದಿಯನ್ನು ಅನ್ಯ ಕೆಲಸಗಳಿಗೆ ಬಳಸುವುದು ಸೂಕ್ತವಲ್ಲ

ಮಹಾನಗರ ಪಾಲಿಕೆಯ ಸಿಬ್ಬಂದಿಯನ್ನು ಅನ್ಯ ಕೆಲಸಗಳಿಗೆ ಬಳಸುವುದು ಸೂಕ್ತವಲ್ಲ - Janathavaniದಾವಣಗೆರೆ, ನ.12- ಈಗಾಗಲೇ ಎಲ್ಲಾ ವಾರ್ಡ್‌ಗಳಲ್ಲಿ ಕೋವಿಡ್ ಲಸಿಕೆ ಶೇ.80 ರಷ್ಟು  ಗುರಿ ಮುಟ್ಟುವ ಹಂತಕ್ಕೆ ನೀಡಲಾಗಿದೆ. ಆದರೆ, ವಾಸ್ತವವಾಗಿ ಈಗಲೂ ಕೂಡ ಪಾಲಿಕೆಯ ಸಿಬ್ಬಂದಿಯನ್ನು ಕೋವಿಡ್ ಲಸಿಕೆ ನೀಡುವ ಕಾರಣ ಹೇಳಿ, ಪ್ರತಿದಿನ ಪಾಲಿಕೆಯಿಂದ ಹೊರಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಪಾಲಿಕೆಯಲ್ಲಿ ಜನನ ಮತ್ತು ಮರಣ ಹಾಗೂ ಆರೋಗ್ಯ ಇಲಾಖೆ ಕಂದಾಯ ಇಲಾಖೆಯವರು ಸಿಗದೇ ತೊಂದರೆಯಾಗಿದೆ.

ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತುಂಬಾ ಅನಾನುಕೂಲವಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಸಿಬ್ಬಂದಿಯನ್ನು ಬಳಸಿಕೊಳ್ಳದೆ, ಅವಶ್ಯವಿದ್ದಲ್ಲಿ ಲಸಿಕೆ ಪೂರ್ಣ ಪ್ರಮಾಣದಲ್ಲಿ ತೆಗೆದುಕೊಳ್ಳದ ವಾರ್ಡ್‌ಗಳಲ್ಲಿ ಜಿಲ್ಲಾಸ್ಪತ್ರೆಯ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಬಳಸಿ ಕೋವಿಡ್ ಲಸಿಕೆ ನೀಡಿ, ಪಾಲಿಕೆ ಸಿಬ್ಬಂದಿಯನ್ನು ಪಾಲಿಕೆಯ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸಲು ಬಿಡಿ ಎಂದು ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಅವರು ಒತ್ತಾಯಿಸಿ, ಈ ಕೂಡಲೇ ಜಿಲ್ಲಾಧಿಕಾರಿಗಳು  ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು  ಆಗ್ರಹಿಸಿದ್ದಾರೆ.

error: Content is protected !!