ಹರಿಹರ, ಮಾ.28- ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಆಶ್ರಯದಲ್ಲಿ ವಿದ್ಯಾರ್ಥಿ ನಿಲಯ, ಸಮುದಾಯ ಭವನ ಮತ್ತು ಮುಖ್ಯದ್ವಾರ ಉದ್ಘಾ ಟನೆ, ನೂತನ ಹೊರ ಬೀರದೇವರ ಪ್ರಾಣ ಪ್ರತಿ ಷ್ಠಾಪನೆ, ಮಹಾಕುಂಭಾಭಿಷೇಕ ಮತ್ತು ಶಾಖಾ ಮಠದ 5ನೇ ವಾರ್ಷಿಕೋತ್ಸವ ಸಮಾರಂಭ ಏ. 3 ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ದಿನಾಂಕ 3 ರ ಶನಿವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಶಿವಾನಂದಪುರಿ ಸ್ವಾಮೀಜಿಯವರಿಂದ ಧ್ವಜಾರೋಹಣ ನಡೆಯುವುದು. ಅಂದು ಬೆಳಿಗ್ಗೆ 10 ಗಂಟೆಗೆ ವಿವಿಧ ಊರುಗಳಿಂದ ಬೀರಲಿಂಗೇಶ್ವರ ದೇವರ ಆಗಮನವಾಗುವುದು.
ಬೆಳಿಗ್ಗೆ 11 ಕ್ಕೆ ಗ್ರಾಮದ ಒಳ ಗುಡಿಯಿಂದ ಶ್ರೀ ಬೀರದೇವರುಗಳ ಉತ್ಸವ ನಡೆಯುವುದು. ಸಾನ್ನಿಧ್ಯವನ್ನು ಶ್ರೀ ತ್ರಿದಂಡಿ ವೆಂಕಟರಾಮಾನುಜ ಜೀಯರ್ ವಹಿಸುವರು. ಉತ್ಸವವನ್ನು ಎಸ್. ಗಂಗಮ್ಮ ಕೋಂ ಬೀರಪ್ಪ ಉದ್ಘಾಟಿಸುವರು. ಜಿ. ದ್ಯಾವಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪರಶುರಾಮಪ್ಪ, ಜೆ.ಸಿ. ನಿಂಗಪ್ಪ, ಜಯಶೀಲ, ಎಂ.ಆರ್. ಮಹೇಶ್, ನಿರ್ಮಲ, ಭಾಗ್ಯಲಕ್ಷ್ಮಿ, ಜಾಹೀರಾಬೀ, ಕೆ. ಜಡಿಯಪ್ಪ ಆಗಮಿಸುವರು.
ದಿನಾಂಕ 4 ರ ಭಾನುವಾರ ಬೆಳಿಗ್ಗೆ 11.30 ಕ್ಕೆ ವಿದ್ಯಾರ್ಥಿನಿಲಯ, ಸಮುದಾಯ ಭವನ, ಮುಖ್ಯ ದ್ವಾರ ಉದ್ಘಾಟನಾ ಸಮಾರಂಭ ನಡೆಯುವುದು.
ಸಾನ್ನಿಧ್ಯವನ್ನು ಶ್ರೀ ಸಿದ್ಧಲಿಂಗ ಸ್ವಾಮೀಜಿ ವಹಿಸುವರು. ಜಗದ್ಗುರು ಶ್ರೀ ನಿರಂಜನಾನಂ ದಪುರಿ ಸ್ವಾಮೀಜಿ ನೇತೃತ್ವ ವಹಿಸುವರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆ.ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಭೈರತಿ ಬಸವರಾಜ್, ಎಂ.ಟಿ.ಬಿ. ನಾಗರಾಜ್, ಆರ್. ಶಂಕರ್, ಜಿ.ಎಂ. ಸಿದ್ದೇಶ್ವರ ಆಗಮಿಸುವರು.
ದಿನಾಂಕ 5 ರ ಸೋಮವಾರ ಬೆಳಿಗ್ಗೆ 11.30 ಕ್ಕೆ ನೂತನ ಹೊರ ಬೀರದೇವರ ಪ್ರಾಣ ಪ್ರತಿಷ್ಠಾಪನೆ ಮಹಾಕುಂಭಾಭಿಷೇಕ ನಡೆಯುವುದು. ಸಾನ್ನಿಧ್ಯವನ್ನು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜಗದ್ಗುರು ಡಾ. ಶಾಂತವೀರ ಸ್ವಾಮೀಜಿ, ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ, ಜಗದ್ಗುರು ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಮುಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಜಗದ್ಗುರು ಶ್ರೀ ವೇಮಾನಂದಪುರಿ ಸ್ವಾಮೀಜಿ, ಜಗದ್ಗುರು ಶ್ರೀ ಶಾಂತಭೀಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ, ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಜಗದ್ಗುರು ಶ್ರೀ ಮಾಚೀದೇವ ಸ್ವಾಮೀಜಿ.
ಮುಖ್ಯ ಅತಿಥಿಗಳು : ಹೆಚ್. ವಿಶ್ವನಾಥ್, ಬಂಡೆಪ್ಪ ಕಾಶೆಂಪೂರ, ಹೆಚ್.ಎಂ. ರೇವಣ್ಣ,
ಕೆ. ವಿರೂಪಾಕ್ಷಪ್ಪ, ರಾಮಪ್ಪ, ಭೈರತಿ ಸುರೇಶ್ ಮತ್ತಿತರರು ಭಾಗವಹಿಸುವರು.