`ಅಮರ್‌ ಜವಾನ್ ಸರ್ಕಲ್’ ಎಂದು ನಾಮಕರಣಕ್ಕೆ ಒತ್ತಾಯ

ದಾವಣಗೆರೆ, ಮಾ.26- ನಗರದ ನಿಜಲಿಂಗಪ್ಪ ಬಡಾವಣೆ ಹತ್ತಿರ ಇರುವ ರಿಂಗ್ ರಸ್ತೆ ಕ್ಲಾಕ್ ವೃತ್ತಕ್ಕೆ ಹುತಾತ್ಮ ಯೋಧರ ಸವಿನೆನಪಿಗಾಗಿ `ಅಮರ್ ಜವಾನ್ ಸರ್ಕಲ್’ ಎಂದು ನಾಮಕರಣ ಮಾಡಿ ಹುತಾತ್ಮ ಯೋಧರನ್ನು ಸ್ಮರಿಸಿಕೊಳ್ಳುವ ಒಂದು ಸದಾವಕಾಶವನ್ನು ನಗರದ ಜನತೆಗೆ ಮಾಡಿಕೊಡಬೇಕೆಂದು ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ. ಯುವರಾಜ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಅಮರ್ ಜವಾನ್ ಸರ್ಕಲ್ ಎಂದು ನಾಮಕರಣ ಮಾಡುವುದರಿಂದ ಇಂದಿನ ಯುವ ಪೀಳಿಗೆಯಲ್ಲಿ ದೇಶ ಭಕ್ತಿಯ ಭಾವನೆ ಬೆಳೆಸಬಹುದಾಗಿದ್ದು, ಈ ವೃತ್ತದ ಪಕ್ಕದಲ್ಲಿ `ಹುತಾತ್ಮ ಯೋಧರ ಉದ್ಯಾನವನ’ವನ್ನು ಹೊಸದಾಗಿ ನಿರ್ಮಾಣ ಮಾಡುತ್ತಿರುವುದರಿಂದ ಈ ವೃತ್ತಕ್ಕೆ `ಅಮರ್‌ ಜವಾನ್ ಸರ್ಕಲ್’ ಎಂದು ನಾಮಕರಣ ಮಾಡುವುದರಿಂದ ಹೆಚ್ಚು ಅರ್ಥಪೂಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕುಮಾರಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರುಗಳಿಗೂ ಸಹ ಮನವಿ ಸಲ್ಲಿಸಿದ್ದಾರೆ. 

ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಗಂಗಾಧರ್, ಪ್ರಕಾಶ್ ಎಸ್., ರಾಮಚಂದ್ರ, ಪ್ರತಾಪ್, ಪ್ರಸನ್ನ ಮತ್ತಿತರರಿದ್ದರು.     

error: Content is protected !!