ದಾವಣಗೆರೆ, ಆ.6- ಮಾಯಕೊಂಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ತರಬೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎನ್.ಸಿ.ವಿ.ಟಿ ಯಿಂದ ಸಂಯೋಜನೆ ಪಡೆದ ಎಲೆಕ್ಟ್ರಿಕಲ್ ಮತ್ತು ಫಿಟ್ಟರ್ ಎರಡು ವೃತ್ತಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಪ್ರವೇಶ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಆ.27 ಕೊನೆಯ ದಿನ. ವಿವರಕ್ಕೆ ಸಂಸ್ಥೆಯ ಪ್ರಾಚಾರ್ಯರು ಅಥವಾ ಇಲಾಖೆಯ ಜಾಲತಾಣ www.emptrg.kar.nic.in ಅನ್ನು ಸಂಪರ್ಕಿಸಬಹುದು.