ದಾವಣಗೆರೆ, ಮಾ.24- ನಿಟುವ ಳ್ಳಿಯ ಶ್ರೀ ಆಂಜನೇಯ ಗುಡಿಯಲ್ಲಿ ಪ್ರತಿ ಶನಿವಾರ ಸಂಜೆ 4.30 ರಿಂದ 6.30 ರವರೆಗೆ ಚಿಕ್ಕಮಕ್ಕಳಿಗೆ ಪ್ರಾಥಮಿಕ, ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕನ್ನಡ ಕಲಿಸಲಾಗುತ್ತದೆ.
ಕನ್ನಡದ ಜೊತೆಗೆ ಸಂಗೀತ, ಭಾಷಣ, ಯೋಗ, ಗಣಿತ, ಚಿತ್ರಕಲೆ ಗಳನ್ನು ಉಚಿತವಾಗಿ ಕಲಿಸಲಾಗುತ್ತದೆ. ಸುಮಾರು 12 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಮಕ್ಕಳು ಉಚಿತ ಶಿಕ್ಷಣ ಪಡೆದಿದ್ದಾರೆ. ನಿಟುವಳ್ಳಿಯ ಶ್ರೀ ಬಸವೇಶ್ವರ ಶಾಲೆಯಿಂದ ಕನ್ನಡ ಕಲಿಕೆಯ ಆಂದೋಲನ ಆರಂಭಿಸಿದ್ದು, ಪೋಷಕರು ಮೊದಲು ಮಕ್ಕಳಿಗೆ ಕನ್ನಡ ಕಲಿಸಬೇಕು ಎಂದು ಮಕ್ಕಳ ಲೋಕದ ಸಂಸ್ಥಾಪಕ ಕೆ.ಎನ್. ಸ್ವಾಮಿ ಮನವಿ ಮಾಡಿದ್ದಾರೆ.
ಇದೇ ವೇಳೆ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ಗಳನ್ನು ಹಂಚಲಾಯಿತು. ಹುಲ್ಲೇಹಾಳ್ ಮಂಜುನಾಥ್ ಮಾತನಾಡಿ, ಬಡ ಮಕ್ಕಳ ಬಗ್ಗೆ ಸರ್ಕಾರ ಹಾಗೂ ಸಾರ್ವಜನಿಕರು ಕಾಳಜಿ ವಹಿಸಬೇಕು ಎಂದರು.