ದಾವಣಗೆರೆ, ಜೂ.27- ಸ್ವಂತ ಸೂರಿಲ್ಲದೇ ನಾಲ್ಕೈದು ದಶಕಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೆಲವರಿಗೆ ಹಾಗೂ ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡಲಾಗದ ಸ್ಥಿತಿಯಲ್ಲಿರುವ ದಕ್ಷಿಣ ಭಾಗದ ಜನರಿಗೆ ಸರ್ಕಾರಿ ಜಾಗದಲ್ಲಿ ನಿವೇಶನವನ್ನು ಉಚಿತವಾಗಿ ಆಗಲಿ ಅಥವಾ ಕಡಿಮೆ ದರದಲ್ಲಿ ನೀಡುವಂತೆ ಭಾರತೀಯ ನ್ಯೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುದ್ದಾಪುರದ ರೆಹಮಾನ್ ಒತ್ತಾಯಿಸಿದರು.
ನಿನ್ನೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಲು ಆಗದಂತಹ ಸ್ಥಿತಿಯಲ್ಲಿ ಜನರಿದ್ದಾರೆ. ಸ್ವಂತ ಸೂರಿಲ್ಲದೆ ಬಾಡಿಗೆ, ಮುಂಗಡ ಕಟ್ಟಲಾಗದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂತಹವರಿಗೆ ಗ್ರಾಮೀಣ ಪ್ರದೇಶಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಮೀನಿನಲ್ಲಿ ಉಚಿತ ನಿವೇಶನವಾಗಲೀ ಅಥವಾ ಕಡಿಮೆ ದರಕ್ಕೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಮೌನೇಶ್ವರಚಾರಿ, ಹುಸೇನ್ಸಾಬ್, ಮೊಹಮ್ಮದ್ ಹನೀಫ್, ಗ್ಯಾರೇಜ್ ಮುನ್ನಾ, ಮಿಯಾಸಾಬ್ ಉಪಸ್ಥಿತರಿದ್ದರು.