ದಾವಣಗೆರೆ, ಮಾ.23- ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ. ದಾವಣಗೆರೆ ವತಿಯಿಂದ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮಂತ್ರಾಲಯದ ಈ ಸಾಲಿನ ರಾಷ್ಟ್ರೀಯ ಕೃಷಿ ಯೋಜನೆಯಡಿ ಉಚಿತ ಹೈನುಗಾರಿಕೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಏಪ್ರಿಲ್ 5 ರಿಂದ ಮೇ 4 ರವರೆಗೆ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಗೆ ಆಸಕ್ತ ರೈತರು ಹಾಗೂ ಗ್ರಾಮೀಣ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಕನಿಷ್ಟ 5ನೇ ತರಗತಿ ಪಾಸಾಗಿರಬೇಕು. ಆಸಕ್ತರು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯ ಜೊತೆಗೆ ಮರುಪಾವತಿಸಲಾಗುವ ಮುಂಗಡ ಹಣ 500 ರೂಗಳನ್ನು ನೀಡಿ, ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಇದೇ ದಿನಾಂಕ 31 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ಡಾ. ಜಿ.ಕೆ. ಜಯದೇವಪ್ಪ, ವಿಷಯ ತಜ್ಞರು, ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಇವರನ್ನು ಸಂಪರ್ಕಿಸುವುದು. ಮೊ: 9591426179, 9449856876.