ರಾಣೇಬೆನ್ನೂರು, ಮಾ.22- ಹಾವೇರಿ ಜಿಲ್ಲೆಯಲ್ಲಿ ಶಿಶುವಿನಹಾಳ, ಕಾಗಿನೆಲೆ ಸೇರಿದಂತೆ ಮೊದಲಿದ್ದ 6 ಪ್ರವಾಸಿ ತಾಣಗಳ ಜೊತೆಗೆ, ಕದರಮಂಡಲಗಿ, ಬಂಕಾಪುರ ನವಿಲುಧಾಮ, ಚೌಡಯ್ಯದಾನಾಪುರ, ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯ, ದೇವರಗುಡ್ಡ, ಗಳಗನಾಥ, ಗುಡ್ಡದ ಮಾದಾಪುರ ಮುಂತಾದ 15 ಹೊಸ ಪ್ರವಾಸಿ ತಾಣಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಈಗ ಒಟ್ಟು 21 ಸ್ಥಳಗಳಿಗೆ ಸರ್ಕಾರ ಮನ್ನಣೆ ನೀಡಿದೆ.
ಅವುಗಳ ಅಭಿವೃದ್ಧಿಗೆ ಅನುದಾನದ ಅವಶ್ಯಕತೆ ಇದೆ ಎಂಬುದು ಗ್ರಾಮಸ್ಥರ ಅನಿಸಿಕೆಯಾಗಿದೆ.