ದಾವಣಗೆರೆ, ಮಾ. 22 – ನಗರದ ಜೆ.ಹೆಚ್.ಪಟೇಲ್ ಕಾಲೇಜಿನಲ್ಲಿ ನಡೆದ 28ನೇ ಜಿಲ್ಲಾ ಮಟ್ಟದ ಮಕ್ಕಳ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದ ಚೇತನ ಒಲಂಪಿಯಾಡ್ ಶಾಲೆ `ಸುಸ್ಥಿರ ಜೀವನಕ್ಕಾಗಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದೆ.
ಶಾಲೆಯ ಆಪ್ತಶೆಟ್ಟಿ `ಯುವ ವಿಜ್ಞಾನಿ’ ಪ್ರಶಸ್ತಿ ಪಡೆದು ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದಾವಣಗೆರೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರ ಇವರ ಸಂಯುಕ್ತಾಶ್ರಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಲಾಗಿತ್ತು. ಈ ವಿದ್ಯಾರ್ಥಿಗಳನ್ನು ವಿಶ್ವವಿಚೇತನ ವಿದ್ಯಾನಿಕೇತನದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ವೀರಮಾಚನೇನಿ, ನಿರ್ದೇಶಕ ಜಿ. ಪವನ್ ಮತ್ತು ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.