ಮಾಸ್ಕ್ ಕಡ್ಡಾಯ ಮಾಡಿ, ಹೆಲ್ಮೆಟ್ ಕಡ್ಡಾಯ ಬೇಡ : ದಿನೇಶ್‌ ಶೆಟ್ಟಿ

ಮಾಸ್ಕ್ ಕಡ್ಡಾಯ ಮಾಡಿ, ಹೆಲ್ಮೆಟ್ ಕಡ್ಡಾಯ ಬೇಡ : ದಿನೇಶ್‌ ಶೆಟ್ಟಿ - Janathavaniದಾವಣಗೆರೆ, ಮಾ.22 – ನಗರದಲ್ಲಿ ಬಿರು ಬೇಸಿಗೆ ಸಮಯ ಪ್ರಾರಂಭವಾಗಿದೆ ಇಂಥಹ ಸಮಯದಲ್ಲಿ ಹೆಲ್ಮೆಟ್ ಕಡ್ಡಾಯಕ್ಕೆ ವಿನಾಯಿತಿ ನೀಡಿ ಕೊರೊನಾ ನಿಯಂತ್ರಣ ಮಾಡುವುದಕ್ಕಾಗಿ  ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯಾದ್ಯಂತ ವಿವಿಧ 8 ಜಿಲ್ಲೆಗಳಲ್ಲಿ ಬೇಸಿಗೆ ಸಮಯದಲ್ಲಿ ಹೆಲ್ಮೆಟ್ ಕಡ್ಡಾಯದಿಂದ ವಿನಾಯಿತಿ ನೀಡಿದ್ದಾರೆ. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿ 38 ರಿಂದ 42 ಡಿಗ್ರಿ ತಾಪಮಾನ ಇರುವ ಬೇಸಿಗೆಯ ಸಮಯದಲ್ಲಿ ಬಿಸಿಲಿನ ಬೇಗೆಯಿಂದ ಜನರು ಬಳಲುತ್ತಿದ್ದು ದಾವಣಗೆರೆ ಜನತೆಗೆ ಹೆಲ್ಮೆಟ್ ವಿನಾಯ್ತಿ ನೀಡಿ ಮಾಸ್ಕ್ ಕಡ್ಡಾಯ ಮಾಡ ಬೇಕಾಗಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಅವರು ವಿನಂತಿಸಿದ್ದಾರೆ.  ಹೆಲ್ಮೆಟ್ ಮತ್ತು ಮಾಸ್ಕ್ ಕಡ್ಡಾಯ ನೀತಿ ಜಾರಿಗೆ ತರುವುದರಿಂದ ಬೇಸಿಗೆ ಸಮಯದಲ್ಲಿ ಹೆಲ್ಮೆಟ್ ಧರಿಸುವುದು ತುಂಬಾ ಕಷ್ಟಕರ ಮತ್ತು ನಾನಾ ರೀತಿಯ ರೋಗಗಳಿಗೆ ತುತ್ತಾಗುವುದರಿಂದ ಹೆಲ್ಮೆಟ್ ಕಡ್ಡಾಯದಿಂದ ವಿನಾಯಿತಿ ನೀಡಬೇಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು. 

 ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಶ್ರೀಕಾಂತ್ ಬಗರೆ, ಯುವರಾಜ್, ಗಂಗಾಧರ್, ಮೇಘರಾಜ್ ಮುಂತಾದವರಿದ್ದರು.

error: Content is protected !!