ಬಿಜೆಪಿ ದ್ವಂದ್ವ ನಿಲುವಿನಿಂದ ಹೊರಬರಲಿ: ಆಹಾರ ಪದ್ದತಿಗೆ ವಿರೋಧಿಸುವುದು ಸಲ್ಲ.
ದಾವಣಗೆರೆ, ಮಾ.21 – ಗೋಹತ್ಯೆ ನಿಷೇಧ ಕುರಿತಂತೆ ಮಾಜಿ ಸಚಿವ ಯು.ಟಿ.ಖಾದರ್ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಅವರು ಸ್ವಾಗತಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ಪಕ್ಷ ಗೋಹತ್ಯೆ ನಿಷೇಧ ಕುರಿತಂತೆ ಮೊದಲು ದ್ವಂದ್ವ ನಿಲುವಿನಿಂದ ಹೊರಬರಲಿ ಎಂದರು. `ಒಂದು ರಾಷ್ಟ್ರ, ಒಂದು ತೆರಿಗೆ’ ಎನ್ನುವ ಬಿಜೆಪಿ ಗೋವುಗಳ ವಿಷಯದಲ್ಲಿ ಏಕೆ ದ್ವಂದ್ವ ನಿಲುವು ಹೊಂದಿದೆ. ಇಡೀ ದೇಶದಲ್ಲೇ ಗೋ ಹತ್ಯೆ ನಿಷೇಧವನ್ನು ಜಾರಿಗೆ ತರಬೇಕು ಹಾಗೂ ಗೋವುಗಳನ್ನು ಸಾಕಲು ಪ್ರತಿ ಗ್ರಾಮಗಳಲ್ಲೂ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೈನ್ ಸಮಾಜ ದವರು ಗೋಶಾಲೆಗಳನ್ನು ಅತ್ಯುತ್ತಮವಾಗಿ ನಡೆಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧಿಸುವ ಮುನ್ನ ಜೈನ್ ಸಮಾಜದವರು ನಡೆಸುವ ಮಾದರಿಯಲ್ಲಿ ಪ್ರತಿ ಗ್ರಾಮಗಳಲ್ಲೂ ಗೋಶಾಲೆಗಳನ್ನು ತೆರೆಯಬೇ ಕೆಂದು ದಿನೇಶ್ ಕೆ.ಶೆಟ್ಟಿ ಒತ್ತಾಯಿಸಿದ್ದಾರೆ.