ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಒತ್ತಾಯ
ದಾವಣಗೆರೆ, ಜೂ.14- ವಿದ್ಯುತ್ ದರ ಗಳನ್ನು ಪರಿಷ್ಕರಣೆ ಮಾಡಿರುವುದು ನ್ಯಾಯ ಸಮ್ಮತವಾಗಿಲ್ಲ ಎಂದು ಹೇಳಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಈ ಪರಿಷ್ಕರಣೆಯನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕೊರೊನಾ ಸೋಂಕು ಅಲೆಯಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿದ್ಯುತ್ ಪರಿಷ್ಕರಣೆ ಮಾಡಿರು ವುದು ಸಮಂಜಸವಲ್ಲ. ಜೀವನ ನಿರ್ವಹಣೆ ಯೇ ಕಷ್ಟವಾಗಿರುವಾಗ ಇದನ್ನು ಭರಿಸು ವುದು ದುಸ್ತರವಾಗುತ್ತದೆ ಎಂದು ಛೇಂಬರ್ ಪ್ರತಿಪಾದಿಸಿದೆ.
ಹಾಲಿ ವಿದ್ಯುತ್ ದರಗಳೇ ತುಂಬಾ ಹೆಚ್ಚಾಗಿರುವಾಗ ಪುನಃ ಪರಿಷ್ಕರಣೆ ಕ್ರಮ ಸರಿಯಲ್ಲ. ಕೈಗಾರಿಕೆಗಳು, ಅಂಗಡಿ – ಮುಂಗ ಟ್ಟುಗಳು ಮುಚ್ಚಿರುವುದರಿಂದ ನಿಗದಿತ ಶುಲ್ಕ ವನ್ನು ಕಟ್ಟುವುದು ಕಷ್ಟಕರ. ಕಾರಣ, ನಿಗದಿತ ಶುಲ್ಕವನ್ನು ಚಾಲ್ತಿ ಸಾಲಿನಲ್ಲಿ ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ಜನರ ಅಭಿ ಪ್ರಾಯವಾಗಿದೆ ಎಂದು ಛೇಂಬರ್ ತಿಳಿಸಿದೆ.
ಜನರ ಅಭಿಪ್ರಾಯವನ್ನು ಗಣನೆಗೆ ತೆಗೆದು ಕೊಂಡು ನಿಗದಿತ ಶುಲ್ಕವನ್ನು ಚಾಲ್ತಿ ಸಾಲಿನಲ್ಲಿ ಮನ್ನಾ ಮಾಡಬೇಕು. ಅಲ್ಲದೇ, ಆಸ್ತಿ ತೆರಿಗೆ ವಿಚಾರವೂ ಅವೈಜ್ಞಾನಿಕವಾಗಿದ್ದು, ಇದನ್ನೂ ಸಹ ಭರಿಸುವುದು ಕಷ್ಟದಾಯಕ ವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ಇರುವ ತೆರಿಗೆ ಯನ್ನು ಮುಂದುವರೆಸಬೇಕು. ಅದನ್ನು ಕಟ್ಟಲು ದಂಡ ಮತ್ತು ಬಡ್ಡಿ ಇಲ್ಲದಂತೆ ಚಾಲ್ತಿ ಸಾಲಿನ ಕೊನೆಯವರೆಗೂ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಛೇಂಬರ್ ವಿನಂತಿಸಿಕೊಂಡಿದೆ.
ಈ ಸಂಬಂಧ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಉಪಾಧ್ಯಕ್ಷ ಮಾಗಾನಹಳ್ಳಿ ನಿಜಾನಂದಪ್ಪ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಅವರುಗಳು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಲಿಖಿತ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕೃತಜ್ಞತೆ : ಕೋವಿಡ್ ಕಾರಣದಿಂದ ಆಗಿರುವ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ಆಗಿರುವ ಅನಾನುಕೂಲಕ್ಕೆ ಪರಿಹಾರ ಒದಗಿಸಿಕೊಟ್ಟ ಜಿಲ್ಲಾಡಳಿತಕ್ಕೆ ಛೇಂಬರ್ ಆಫ್ ಕಾಮರ್ಸ್ ಕೃತಜ್ಞತೆ ಸಲ್ಲಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ಜಿಲ್ಲಾಡಳಿತವು ಅತ್ಯಾವಶ್ಯಕ ಚಟುವಟಿಕೆಗಳಿಗೆ ಕೆಲವು ಕಟ್ಟುನಿಟ್ಟಿನ ನಿಬಂಧನೆಗಳಪಡಿಸಿ ಅನುಮತಿ ಕೊಡುವುದರ ಮೂಲಕ ಸಹಕಾರ ನೀಡಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಕೃತಜ್ಞತೆ ಪತ್ರದಲ್ಲಿ ಛೇಂಬರ್ ತಿಳಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಭೇಟಿ ಮಾಡಿದ ಸಂಸ್ಥೆಯ ಉಪಾಧ್ಯಕ್ಷ ಮಾಗಾನಹಳ್ಳಿ ನಿಜಾನಂದಪ್ಪ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭು ಲಿಂಗಪ್ಪ, ಖಜಾಂಚಿ ಟಿ.ಎಸ್. ಜಯರುದ್ರೇಶ್, ಜವಳಿ ಉದ್ಯಮಿ ಬಿ.ಸಿ. ಉಮಾಪತಿ, ಎಸ್. ಕೆ. ಶ್ರೀಧರ, ಅಗಡಿ ಮಹಾಂತೇಶ್ ಮತ್ತಿತರರು ಧನ್ಯವಾದ ಹೇಳಿದರು.