ರಾಣೇಬೆನ್ನೂರು, ಮಾ.21 – ಹಾವೇರಿಯಲ್ಲಿ ನಡೆಯುತ್ತಿರುವ ರೈತರ ಮಹಾ ಪಂಚಾಯತ್ ಸಮಾವೇಶಕ್ಕೆ ಆಗಮಿಸಿದ ರಾಷ್ಟ್ರ ರೈತ ನಾಯಕ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಸಂಯುಕ್ತ ಐಕ್ಯ ಹೋರಾಟ ಸಮಿತಿಯ ಅಧ್ಯಕ್ಷ ರಾಕೇಶ್ ಟಿಕಾಯತ್ ರವರಿಗೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಚಳಗೇರಿ ಟೋಲ್ ಪ್ಲಾಜಾದ ಹತ್ತಿರ ಸ್ವಾಗತ ಮಾಡಿಕೊಂಡ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರುಗಳು ರಾಕೇಶ ಟಿಕಾಯತ್ ಮತ್ತು ಅವರ ಜೊತೆ ಹೋರಾಟಗಾರರಿಗೆ ಶಕ್ತಿ ತುಂಬಲು ಕರ್ನಾಟಕದ ರೈತರು ನಿಮ್ಮ ಜೊತೆಗಿದ್ದೇವೆ. ನಿಮ್ಮ ಹೋರಾಟ ಮುಂದುವರೆಸಿರಿ. ರೈತ ವಿರೋಧಿ, ಕಾರ್ಮಿಕ ವಿರೋಧಿ, ಕೃಷಿ ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರ್ಕಾರ, ವಾಪಸ್ ಪಡೆಯುವ ತನಕ ವಿರಮಿಸದೇ ಹೋರಾಟ ಮಾಡಿರಿ. ಇಡೀ ಕರ್ನಾಟಕದ ರೈತರು ನಿಮ್ಮ ಜೊತೆಗೆ ಇದ್ದೇವೆ. ಇಡೀ ಕರ್ನಾಟಕದ ರೈತರ ಶಕ್ತಿಯ ಧ್ಯೋತಕವಾಗಿ ಗದೆ ನೀಡಿ ಸ್ವಾಗತಿಸಿ ಸತ್ಕರಿಸಿದ್ದೇವೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಉತ್ಸಾಹಭರಿತರಾಗಿ ನುಡಿದರು. ಟಿಕಾಯತ್ ರವರ ಜೊತೆಗಿದ್ದ ಹೋರಾಟ ಗಾರರಾದ ಯಧುವೀರಸಿಂಗ್, ದರ್ಶನಪಾಲ್, ಕೋಡಿ ಹಳ್ಳಿ ಚಂದ್ರಶೇಖರ್, ಚುಕ್ಕಿ ನಂಜುಂಡಸ್ವಾಮಿ ಇವರಿಗೆ ಹಸಿರು ಶಾಲು ಹೊದಿಸಿ ಸಮಾವೇಶಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಈರಣ್ಣ ಹಲಗೇರಿ ಮಾತನಾಡಿ ರೈತ ವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವ ತನಕ ತಮ್ಮ ಹೋರಾಟವನ್ನು ನಿಲ್ಲಿಸಬಾರದು. ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಡಾ. ಸ್ವಾಮಿನಾಥನ್ ವರದಿ ಜಾರಿಯಾಗುವ ತನಕ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುರೇಶಪ್ಪ ಗರಡಿಮನಿ, ಸುರೇಶ ಮಲ್ಲಾಪುರ, ದಿಳ್ಳೆಪ್ಪ ಸತ್ತೆಪ್ಪನವರ, ಹನುಮಂತಪ್ಪ ಮುದಿಗೌಡ್ರ, ಹರಿಹರಗೌಡ ಪಾಟೀಲ, ಭೀಮಪ್ಪ ಹುಲಗಿನಹೊಳೆ, ಹನುಮಂತಪ್ಪ ಕುಂಬಳೂರು, ರಾಜು ಬಾತಿ, ಕುಮಾರ ಬಣಕಾರ, ನಿಂಗಪ್ಪ ಸತ್ತೆಪ್ಪನವರ, ಉಮೇಶ ಊದಗಟ್ಟಿ, ಯಲ್ಲಾರೆಡ್ಡಿ ಯರೇಕುಪ್ಪಿ, ನಾಗರಾಜ ಯಲ್ಲಕ್ಕನವರ ಮತ್ತಿತರರು ಉಪಸ್ಥಿತರಿದ್ದರು.