ದಾವಣಗೆರೆ, ಮಾ. 21 – ಇನ್ನೋವಾ ವಾಹನ ಮಾಲೀಕನ ಮನೆಯಲ್ಲಿದ್ದರೂ, ಅದು ಹೆಬ್ಬಾಳ್ ಟೋಲ್ ಮೂಲಕ ಹಾದು ಹೋಗಿದೆ ಎಂದು, ಅದಕ್ಕೆ ಸಂಬಂಧಿಸಿದಂತೆ ಫಾಸ್ಟ್ಟ್ಯಾಗ್ನಿಂದ ರೂ. 60 ಶುಲ್ಕ ವಸೂಲಾತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಎ 17 ಎನ್ 6828 ಸಂಖ್ಯೆಯ ಇನ್ನೋವಾ ವಾಹನ ಮಾಲೀಕರಾದ ನ್ಯಾಯವಾದಿ ಆವರಗೆರೆಯ ಎಸ್. ಪರಮೇಶ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮೂಲಕ ದೂರು ಸಲ್ಲಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. ಇದೇ ದಿನಾಂಕ 19ರ ರಾತ್ರಿ 11.14ರ ಸಮಯದಲ್ಲಿ ತಾನು ಮನೆಯಲ್ಲಿದ್ದೆ, ವಾಹನ ಕೂಡ ಮನೆಯ ವಠಾರದಲ್ಲಿತ್ತು. ಆದರೂ, ಟೋಲ್ ಮೂಲಕ ವಾಹನ ಹಾದು ಹೋಗಿದೆ ಎಂದು ಫಾಸ್ಟ್ಟ್ಯಾಗ್ನಿಂದ ಶುಲ್ಕ ವಸೂಲಾತಿ ಮಾಡಿರುವುದು ತನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಪರಮೇಶ್ ಅವರು ದೂರಿನಲ್ಲಿ ಹೇಳಿದ್ದಾರೆ.