ರಾಣೇಬೆನ್ನೂರು, ಮಾ.18- `ರಾಣೇ ಬೆನ್ನೂರು ಡಾನ್’ ಎಂದು ಕರೆಯಲಾಗುತ್ತಿದ್ದ ಅಪಾರ ಅಭಿಮಾನಿಗಳನ್ನು ಹೊಂದಿರುವ ಮರಿಯಪ್ಪ ಗುದಿಗೇರ ಅವರ ಮತ್ತೊಂದು ಹೋರಿ ಸಾವನ್ನಪ್ಪಿದೆ.
ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿ ಬಂಗಾರ ಪದಕಗಳನ್ನು ಗಳಿಸಿದ್ದ ಮರಿಯಪ್ಪನವರ ಮೆಚ್ಚಿನ ಹೋರಿ `ರಾಣೇಬೆನ್ನೂರು ಹುಲಿ’ ಕಳೆದ ತಿಂಗಳು ಸಾವನ್ನಪ್ಪಿತ್ತು. ಒಂದು ವಾರದಲ್ಲಿಯೇ ಮರಿಯಪ್ಪನವರ ಮಡದಿ ನಿಧನರಾಗಿದ್ದರು. ಈಗ ಅವರ ಇನ್ನೊಂದು ಹೋರಿಯ ಸಾವಿನಿಂದ ಗುದಿಗೇರ ಕುಟುಂಬ ತೀವ್ರ ಸಂಕಟ ಅನುಭವಿಸುವಂತಾಗಿದೆ.
ನಗರಸಭೆ ಸದಸ್ಯರು, ವರ್ತಕರು, ಅನೇಕ ಅಭಿಮಾನಿಗಳು ರಾಣೇಬೆನ್ನೂರು ಡಾನ್‌ನ ದರ್ಶನ ಪಡೆದರು. ಶವದ ಮೆರವಣಿಗೆ, ನಗರದಾದ್ಯಂತ ಸಂಚರಿಸಿ, ದೇವರಗುಡ್ಡ ರಸ್ತೆಯಲ್ಲಿನ ಮರಿಯಪ್ಪನವರ ಜಮೀನಿನಲ್ಲಿ `ರಾಣೇಬೆನ್ನೂರು ಹುಲಿ’ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು.