ಹರಪನಹಳ್ಳಿ, ಆ.4- ಪಟ್ಟಣದ ವಾಲ್ಮೀಕಿ ನಗರದ ನಿವಾಸಿ ವೈ. ಅರುಣ ಕುಮಾರ್ ಅವರ ಪುತ್ರಿ ವೈ. ಅಶ್ವಿನಿ ದ್ವಿತೀಯ ಪಿಯುಸಿ ಸಿಬಿಎಸ್‍ಇ ಪರೀಕ್ಷೆಯಲ್ಲಿ 500ಕ್ಕೆ 495 ಅಂಕ ಪಡೆದು ಶೇ. 99 ರಷ್ಟು ಫಲಿತಾಂಶ ಪಡೆದು ಬಿಹಾರದ ಪಾಟ್ನಾ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ಪಾಟ್ನಾದ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಂದೆ ವೈ. ಅರುಣ್ ಕುಮಾರ್ ಬಿಹಾರ ರಾಜ್ಯದಲ್ಲಿ ಐಎಎಸ್ ಅಧಿಕಾರಿಯಾಗಿದ್ದಾರೆ. ಅಶ್ವಿನಿ ಸಾಧನೆಗೆ ಇಂಜಿನಿಯರ್ ವೈ. ವಸಂತಕುಮಾರ್, ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ. ವಾಲ್ಮೀಕಿ ನಾಯಕ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷ ಕಂಚಿಕೇರಿ ಜಯಲಕ್ಷ್ಮಿ, ಏಕಲವ್ಯ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಆರ್. ಪ್ರಕಾಶ್ ಇನ್ನಿತರರು ಅಭಿನಂದಿಸಿದ್ದಾರೆ.