ಅಥಣಿ ಸಂಯುಕ್ತ ಪ.ಪೂ. ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ

ದಾವಣಗೆರೆ, ಮಾ.18- ನಗರದ ಎಸ್‌.ಎಸ್‌. ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜಿನ 2020-21ನೇ ಸಾಲಿನ ವಿದ್ಯಾರ್ಥಿ ಸಂಘ ಮಂಗಳವಾರ ಉದ್ಘಾಟನೆಗೊಂಡಿತು.

ಸಂಘವನ್ನು ಉದ್ಘಾಟಿಸಿದ ದಾವಣಗೆರೆ ವಿವಿ ಕುಲಸಚಿವರಾದ (ಪರೀಕ್ಷಾಂಗ) ಪ್ರೊ. ಹೆಚ್‌.ಎಸ್. ಅನಿತ ಅವರು, ಆಧುನಿಕ ಶಿಕ್ಷಣದಲ್ಲಿ ಸಂವಹನ ಮಾಧ್ಯಮಗಳ ಪ್ರಭಾವ, ಶೈಕ್ಷಣಿಕ ಪ್ರಗತಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಪಾತ್ರ ಕುರಿತು ಮಾತನಾಡಿದರು. ಸ್ತ್ರೀ ಶಿಕ್ಷಣದ ಮಹತ್ವ, ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕೇಂದ್ರಿತ ಅಧ್ಯಯನಗಳಿಗಿರುವ ಅವಕಾಶ ಮತ್ತು ಪ್ರಾಶಸ್ತ್ಯದ ಬಗ್ಗೆ ಮಾಹಿತಿ ನೀಡಿದರು.

ಆಧುನಿಕ ಶಿಕ್ಷಣದಲ್ಲಿ ಸಿ.ಎ. ಅಧ್ಯಯನಕ್ಕೆ ಪ್ರವೇಶ ಮತ್ತು ಅವಕಾಶ ಗಳ ಮಾಹಿತಿ, ಕಂಪನಿ ಸೆಕ್ರೆಟರಿ ಹುದ್ದೆಯ ಮಹತ್ವವನ್ನು ತಿಳಿಸಿಕೊಟ್ಟರು.

ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್‌. ನಾಗರಾಜಪ್ಪ ಮಾತನಾಡಿ, ಮನುಷ್ಯರಲ್ಲಿ ದೃಢತೆ ಮತ್ತು ಮನಸ್ಸಿನ ಶಕ್ತಿಯಿಂದ ಏನನ್ನಾದರೂ ಸಾಧಿಸಬಹುದು ಎಂದರು.

ವಿದ್ಯಾರ್ಥಿಗಳು ಗಾಂಧೀಜಿ, ಅಂಬೇಡ್ಕರ್‌, ಸರ್‌ ಎಂ. ವಿಶ್ವೇಶ್ವರಯ್ಯ ಅವರಂತೆ ಗುರಿಯನ್ನಿಟ್ಟು ಮುನ್ನಡೆದರೆ ಸಾಧಿಸಲು ಸಾಧ್ಯವಿದೆ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರಂತೆ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಬೆಳವಣಿಗೆ ಸಾಧ್ಯ. ನಮ್ಮ ಕನಸು ಶಕ್ತಿಯಿಂದ ಕೂಡಿದರೆ ಆಕಾಶದೆತ್ತರಕ್ಕೆ ಬೆಳೆಯಬಹುದು ಎಂದು ಉದಾಹರಿಸಿದರು.

ಶ್ರೀ ವಿನಾಯಕ ಎಜುಕೇಶನ್‌ ಟ್ರಸ್ಟ್‌ ಸದಸ್ಯ ಅಥಣಿ ಪ್ರಶಾಂತ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ಕೆ. ಷಣ್ಮುಖ, ಕೆ. ರಾಜಶೇಖರ್‌, ಗುರು ಮತ್ತಿತರರು ಉಪಸ್ಥಿತರಿದ್ದರು.

ಹರೀಶ್‌ ಮತ್ತು ಶಾಂಭವಿ ಪ್ರಾರ್ಥಿಸಿದರು. ದೇವರಾಜ್ ಸ್ವಾಗತಿಸಿದರು. ಆದಿತ್ಯ ಮತ್ತು ರಚನಾ ನಿರೂಪಿಸಿದರು. ರಶ್ಮಿ ವಂದಿಸಿದರು. ರಾಜಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!