ದಾವಣಗೆರೆ, ಆ.3- ಡಾ.ಬಾಬು ಜಗ ಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಅರ್ಹ ಚರ್ಮ ಕುಶಲಕರ್ಮಿ ಗಳಿಂದ ವಿವಿಧ ಯೋಜನೆಗಳಿಗೆ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಕೌಶಲ್ಯಾಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರ, ಚರ್ಮ ತಾಂತ್ರಿಕ ಉನ್ನತ ಶಿಕ್ಷಣಕ್ಕಾಗಿ ಡಿಪ್ಲೋಮಾ ಇನ್ ಲೆದರ್ ಮತ್ತು ಫ್ಯಾಷನ್ ಟೆಕ್ನಾಲಜಿ ವತಿಯಿಂದ ವಸತಿ ಕಾರ್ಯಾಗಾರ ಯೋಜನೆ, ಸ್ವಾವಲಂಬಿ ಮಾರಾಟ ಮಳಿಗೆ ಯೋಜನೆ, ದುಡಿಮೆ ಬಂಡವಾಳ ಯೋಜನೆ ಅಥವಾ ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಪೂರ್ತಿ ಯೋಜನೆಯಡಿ ಸಹಾಯ ಧನ, ಪಾದುಕೆ ಕುಟೀರ ಯೋಜನೆ, ಸಂಚಾರಿ ವಾಹನ ಯೋಜನೆ, ಚರ್ಮ ಶಿಲ್ಪ ಯಂತ್ರಾಧಾರಿತ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಜನೆ, ನೇರಸಾಲ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದೇ ದಿನಾಂಕ 10 ರೊಳ ಗಾಗಿ https//lidkar.onlin ಮೂಲಕ ಅರ್ಜಿ ಅಪ್ ಲೋಡ್ ಮಾಡಬಹುದು. ಅರ್ಜಿಗಳನ್ನು ಲಿಂಕ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಜಿಲ್ಲಾ ಸಂಯೋಜಕರ ಕಛೇರಿಗೆ ಸಲ್ಲಿಸ ಬೇಕು. ವಿವರಕ್ಕೆ 97418 33307 ಅನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.