ದಾವಣಗೆರೆ, ಆ. 3 – ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮೇಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿ ಸಲು ಶೇ.5 ರಷ್ಟು ರಿಯಾಯಿತಿಯ ಕಾಲಾವಧಿಯನ್ನು ಇದೇ ದಿನಾಂಕ 31 ರವರೆಗೆ ವಿಸ್ತರಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಗಳು ಕುಂಠಿತವಾಗಿರುವ ಕಾರಣ ಸರ್ಕಾರದ ಆದೇಶದಂತೆ ಈ ಕ್ರಮ ಕೈಗೊಳ್ಳ ಲಾಗಿದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ತಿಳಿಸಿದ್ದಾರೆ.
January 24, 2025