ದಾವಣಗೆರೆ, ಆ.3- ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಚಾಲ್ತಿಯಲ್ಲಿರುವ ಎಎವೈ, ಪಿಹೆಚ್‍ಹೆಚ್ (ಬಿಪಿಎಲ್) ಹಾಗೂ ಎನ್‍ಪಿಹೆಚ್‍ಹೆಚ್ (ಎಪಿಎಲ್) ಪಡಿತರ ಚೀಟಿದಾರರಿಗೆ ಇಂದಿನಿಂದ ಇದೇ ದಿನಾಂಕ 10 ರವರೆಗೆ ನ್ಯಾಯಬೆಲೆ ಅಂಗಡಿ ಕೇಂದ್ರಗಳಲ್ಲಿ ಪಡಿತರ ಚೀಟಿದಾರರ ಹೆಬ್ಬೆರಳು ಗುರುತು ಪಡೆದು, ಮರುನೋಂದಣಿ ಮಾಡುವ ಕಾರ್ಯವು ನಡೆಯುತ್ತಿದೆ. ಈವರೆಗೂ ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ಕೇಂದ್ರಕ್ಕೆ ತೆರಳಿ, ಹೆಬ್ಬೆರಳಿನ ಗುರುತು ನೀಡಿ, ಉಚಿತವಾಗಿ ಇ-ಕೆವೈಸಿ, ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
January 24, 2025