ಜಗಳೂರು, ಮಾ.16- ತಾಲ್ಲೂಕಿನ ದಿದ್ದಿಗೆ ಗ್ರಾಮದ ಲೇ. ಟಿ. ಜಂಬಣ್ಣನವರ ಪತ್ನಿ ಶ್ರೀಮತಿ ಕಡಬಗೆರೆ ಬಸಮ್ಮನವರು ತಮ್ಮ ಮಗನಿಗೆ ಕಿಡ್ನಿ ದಾನ ಮಾಡುವ ಮೂಲಕ ಮರುಜನ್ಮ ನೀಡಿದ್ದಾರೆ.
ಬಸಮ್ಮನವರ ಮಗ ಎಸ್.ಬಿ. ಬಸವರಾಜ್ (47 ವರ್ಷ) ಎರಡೂ ಕಿಡ್ನಿ ವೈಫಲ್ಯಗೊಂಡಿದ್ದು, ಅವರನ್ನು ಉಳಿಸಿಕೊಳ್ಳಲು ಪಣ ತೊಟ್ಟು ತಮ್ಮದೇ ಕಿಡ್ನಿಯನ್ನು ಇಳಿವಯಸ್ಸಿನಲ್ಲಿ ನೀಡಿ, ಕರುಳಿನ ಕುಡಿಗೆ ಮತ್ತೊಮ್ಮೆ ಜೀವ ನೀಡಿದ್ದಾರೆ. ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು, ಮಗ ಮತ್ತು ತಾಯಿ ಆರೋಗ್ಯವಾಗಿದ್ದಾರೆ.