ಆಶ್ರಯಕ್ಕೆ ವಶಪಡಿಸಿಕೊಂಡ ಜಮೀನಿನ ಪರಿಹಾರಕ್ಕೆ ಪ್ರತಿಭಟನೆ

ದಾವಣಗೆರೆ, ಮಾ. 16 – ಆಶ್ರಯ ಮನೆ ನಿರ್ಮಿಸಲು ಪಾಲಿಕೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ಸ್ವಚ್ಛತಾ ಯೋಗಿ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್. ಹುಲುಗೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ವಿನೋಬನಗರದ ಬಿ.ಎಂ. ಬಸವರಾಜಪ್ಪ ಹಾಗೂ ಸಾವಿತ್ರಮ್ಮ ಎಂಬುವವರಿಗೆ ಸೇರಿದ ಎಸ್.ಪಿ.ಎಸ್. ನಗರದ 2ನೇ ಹಂತದಲ್ಲಿರುವ ಸರ್ವೆ ನಂಬರ್ 145/4ಕ್ಕೆ ಸೇರಿದ 2 ಎಕರೆ 24 ಗುಂಟೆಯನ್ನು ಅನಧಿಕೃತವಾಗಿ ವಶಕ್ಕೆ ಪಡೆದುಕೊಂಡು ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದರು.

ಕಳೆದ 6-7 ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಾ ಬಂದಿದ್ದರೂ ಪರಿಹಾರ ನೀಡಿಲ್ಲ. ಹೀಗಾಗಿ ಇನ್ನು 15 -20 ದಿನಗಳಲ್ಲಿ ಪರಿಹಾರ ನೀಡದಿದ್ದರೆ ಮುಖ್ಯಮಂತ್ರಿ ಇಲ್ಲವೇ ವಸತಿ ಸಚಿವರ ನಿವಾಸದ ಎದುರು ಜಮೀನು ಕಳೆದುಕೊಂಡವರ ಕುಟುಂಬ ಪ್ರತಿಭಟನೆ ನಡೆಸಲಿದೆ ಎಂದವರು ಹೇಳಿದ್ದಾರೆ. 

ಬಿ.ಎಂ. ಬಸವರಾಜಪ್ಪ, ಸಾವಿತ್ರಮ್ಮ, ಡಿ.ಸಿ. ಲಕ್ಷ್ಮಣ, ಎಸ್. ಮಲ್ಲಿಕಾರ್ಜುನ, ಮಂಜುನಾಥ, ನಾಗರಾಜ, ರುದ್ರೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!