ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರಮಾಣ ಪತ್ರಕ್ಕೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಹಕ್ಕೊತ್ತಾಯ

ದಾವಣಗೆರೆ, ಮಾ.16- ಕೇಂದ್ರ ಸರ್ಕಾರ ಸಂವಿ ಧಾನ ತಿದ್ದುಪಡಿ ಮಾಡಿ ಯಾವುದೇ ಮೀಸಲಾತಿ ದೊರೆ ಯದ, ಪಡೆಯದ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶೇ. 10 ರ ಮೀಸಲಾತಿಯನ್ನು ದೇಶಾದ್ಯಂತ ಜಾರಿಗೆ ತಂದಿದೆ. ದುರಾದೃಷ್ಟವಶಾತ್ ರಾಜ್ಯ ಸರ್ಕಾರದ ಆದೇಶದಲ್ಲಿನ ತಾಂತ್ರಿಕ ದೋಷದ ನ್ಯೂನತೆಗಳಿಂದಾಗಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಾಗೂ ಸಾರಸ್ವತ ಬ್ರಾಹ್ಮಣ ಸಮಾಜ ದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ,  ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರಮಾಣ ಪತ್ರವನ್ನು ನೀಡಲಾಗುತ್ತಿಲ್ಲ. ಈ ರೀತಿಯ ಅನ್ಯಾಯ ಇನ್ನೂ ಕೆಲವು ಸಾಮಾನ್ಯ ವರ್ಗದ ಸಮುದಾ ಯದವರಿಗೂ ಆಗುತ್ತಿದೆ. ತಕ್ಷಣವೇ ಸರ್ಕಾರ ಈ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸಿ, ನ್ಯಾಯ ಒದಗಿಸಲು ಗೌಡ ಸಾರಸ್ವತ ಸಮಾಜದ ಅಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ಅವರು, ಜಿ.ಎಸ್.ಬಿ. ಸಮಾಜದ ಸರ್ವ ಸಮುದಾಯದ ಪರವಾಗಿ ಹಕ್ಕೊತ್ತಾಯ ಮಾಡಿದ್ದಾರೆ.

error: Content is protected !!