ಡಿಎಪಿ ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಕೇಂದ್ರದ ಕ್ರಮಕ್ಕೆ ಲಿಂಗರಾಜ್ ಸ್ವಾಗತ

ಡಿಎಪಿ ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಕೇಂದ್ರದ ಕ್ರಮಕ್ಕೆ ಲಿಂಗರಾಜ್ ಸ್ವಾಗತ - Janathavaniದಾವಣಗೆರೆ,ಮೇ 23- ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್ ಸ್ವಾಗತಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರದ ಈ ನಿರ್ಧಾರದಿಂದಾಗಿ ರಸಗೊಬ್ಬರವನ್ನು ಹಳೇ ದರಕ್ಕೆ ಕೊಟ್ಟಂತಾಗಿದ್ದು, ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

ಗೊಬ್ಬರವನ್ನು ಗ್ರಾಮೀಣ ಪ್ರದೇಶದ ವಿ.ಎಸ್.ಎಸ್.ಎನ್. ಮೂಲಕ ರೈತರಿಗೆ ಕೊಡುವ ವ್ಯವಸ್ಥೆ ಮಾಡುವಂತೆ ಲಿಂಗರಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರವು ಅಕ್ಕಿ ಗಿರಣಿಗಳನ್ನು ವಶಕ್ಕೆ ತೆಗೆದುಕೊಂಡು ಡ್ರೈಯರ್ ಮೂಲಕ ಒಣಗಿಸಿ ತೂಕ ಮಾಡಿದ್ದಲ್ಲಿ ರೈತರಿಗೆ ಸಹಾಯವಾಗುತ್ತದೆ ಎಂದು ಅವರು ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಖರೀದಿದಾರರು ಎಪಿಎಂಸಿಗೆ ಬರದ ಕಾರಣದಿಂದಾಗಿ ಭತ್ತವನ್ನು ಸರ್ಕಾರವೇ ಖರೀದಿಸಬೇಕೆಂದು ಲಿಂಗರಾಜ್ ಒತ್ತಾಯಿಸಿದ್ದಾರೆ.

error: Content is protected !!