ದಾವಣಗೆರೆ, ಮೇ 23- ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪದಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರವರನ್ನು ಸೇವೆಯಿಂದಲೇ ವಜಾಗೊಳಿಸಬೇಕೆಂದು ವಾಲ್ಮೀಕಿ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ.ವೀರಣ್ಣ ಆಗ್ರಹಿಸಿದ್ದಾರೆ.
ನ್ಯಾಯ ಕೇಳಲೆಂದು ತಮ್ಮ ಬಳಿಗೆ ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕಿರುಗುಂದ ಗ್ರಾಮದ ಪುನೀತನನ್ನು ಗೋಣಿಬೀಡು ಠಾಣೆ ಪಿ.ಎಸ್.ಐ ಅರ್ಜುನ್ ಅವರು ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ನಡೆಸಿಕೊಂಡು ಮೂತ್ರ ಕುಡಿಸಿ ಮಾನವೀಯ ಮೌಲ್ಯಗಳಿಗೆ ತಿಲಾಂಜಲಿ ಇಟ್ಟು ಮೃಗದಂತೆ ವರ್ತಿಸಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ದಲಿತ ಯುವಕನ ಜಾತಿ ಕೇಳಿ ಮನಬಂದಂತೆ ಥಳಿಸಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ ಎಂದು ತಿಳಿಸಿರುವ ವೀರಣ್ಣ, ಅನ್ಯಾಯಕ್ಕೊಳಗಾದ ಯುವಕನಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.