ದಾವಣಗೆರೆ, ಆ.2- ಬೆಂಗಳೂರಿನಲ್ಲಿ ಅಫ್ರಿಕನ್ನರ ಪುಂಡಾಟಕ್ಕೆ ಬೆಣ್ಣೆ ನಗರಿಯ ಪೋರ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನಮ್ಮ ರೊಟ್ಟಿ ತಿಂದು ನಮ್ಮ ಕರ್ನಾಟಕದ ನೀರು ಕುಡಿದು, ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿಯಾ. ನಮ್ಮ ಪೊಲೀಸರಿಗೆ ಹೊಡಿತೀಯಾ ಆಫ್ರಿಕಾ ನಾಯಿ ಎಂದು ತಾಲ್ಲೂಕಿನ ಕುಕ್ಕುವಾಡ ಗ್ರಾಮದ ನಾಲ್ಕು ವರ್ಷದ ಉಗ್ರಂ ಎಂಬ ಪೋರನು ಪುಂಡಾಟವಾಡಿದ ಆಫ್ರಿಕನ್ನರ ವಿರುದ್ಧ ಉಗ್ರಾವತಾರ ತಾಳಿದ್ದಾನೆ. ಪೋರನು ಹಸಿರು ಶಾಲು ಹಾಕಿಕೊಂಡು ಆಫ್ರಿಕನ್ನರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.