ದಾವಣಗೆರೆ, ಮೇ 23- ಪ್ರಸ್ತುತ ಕೋವಿಡ್ 19 ಪ್ರಭಾವದಿಂದಾಗಿ ಬಡವರ,ಕೂಲಿನಾಲಿ ಮಾಡುವವರ ಜೀವನ ಸಂಕಷ್ಟದಲ್ಲಿದ್ದು, ಬಡವರಿಗೆ ಊಟದ ವ್ಯವಸ್ಥೆ ಮಾಡುವಲ್ಲಿ ಸಹಕರಿಸುವಂತೆ ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿ.ಜಿ.ದಿನೇಶ್ ಅವರು ದಾನಿಗಳಲ್ಲಿ ಮನವಿ ಮಾಡಿದೆ.
`ಅನ್ನ ದೇವರ ಮುಂದೆ ಇನ್ನು ದೇವರುಂಟೆ’ ಅನ್ನದಾನ ಶ್ರೇಷ್ಠ ದಾನವೆಂದು ತಿಳಿದು ಬಡವರ ಸಂಕಷ್ಟವನ್ನರಿತ ಕರುಣಾ ಟ್ರಸ್ಟ್ ಪ್ರತಿದಿನ ದಾವಣಗೆರೆ ಮತ್ತು ಹರಿಹರದಲ್ಲಿ 350 ಜನಕ್ಕೆ ಅವರು ಇದ್ದಲ್ಲಿಗೆ ಹೋಗಿ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ತಿಳಿಸಿದ್ದಾರೆ.
ಕಷ್ಟದ ಸಂದರ್ಭದಲ್ಲಿ ಬಡವರ ಹಸಿವನ್ನು ನೀಗಿಸುವುದು ಮಾನವೀಯತೆ ಯಾಗಿದ್ದು, ಹಸಿದವರ ಹಸಿವನ್ನು ನೀಗಿಸಲು ಕರುಣಾ ಟ್ರಸ್ಟ್ ನೊಂದಿಗೆ ಸಹಕರಿಸಬೇಕು. ಒಂದು ದಿನಕ್ಕೆ 350 ಬಡವರಿಗೆ ಊಟ ಒದಗಿಸಲು ರೂ.7000 ಮತ್ತು 250 ಜನಕ್ಕೆ ಊಟ ಒದಗಿಸಲು ರೂ. 5000 ಆಗುವುದು. ದಾನಿಗಳು 7000, 5000 ಅಥವಾ ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಹಣವನ್ನಾದರೂ ಮನಸ್ಸಿದ್ದಷ್ಟು ಧನ ಸಹಾಯ ಮಾಡಿ ರಶೀದಿ ಪಡೆಯಬಹುದು.
ತಾವು ಕರೆ ಮಾಡಿದರೆ ತಮ್ಮ ಮನೆಗೇ ಬಂದು ಹಣ ಸ್ವೀಕರಿಸಲಾಗುತ್ತದೆ. ವಿವರಕ್ಕೆ ಟ್ರಸ್ಟ್ ವ್ಯವಸ್ಥಾಪಕ ಆರ್.ಬಿ. ಪಾಟೀಲ್ (63613
52381), ಸಹಾಯಕ ವ್ಯವಸ್ಥಾಪ ಕರಾದ ವೀಣಾ ಕುಮಾರ್
(9110455199) ಅವರನ್ನು ಸಂಪರ್ಕಿಸಬಹುದು.