ರೇನ್‍ಬೋ ಶಾಲೆಗೆ ಶೇ.100 ರಷ್ಟು ಫಲಿತಾಂಶ

ರೇನ್‍ಬೋ ಶಾಲೆಗೆ ಶೇ.100 ರಷ್ಟು ಫಲಿತಾಂಶ - Janathavaniರಾಣೇಬೆನ್ನೂರು, ಆ.1- ಕಮದೋಡ ಗ್ರಾಮದ ರೇನ್ ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯ ಐಸಿಎಸ್‌ಇ ವಿಭಾಗದ 2020-21ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸತತವಾಗಿ 10ನೇ ಬಾರಿಗೆ ಶೇ. 100 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳ ಪೈಕಿ 20 ಉನ್ನತ ಶ್ರೇಣಿ, 08 ಪ್ರಥಮ ಸ್ಥಾನದಲ್ಲಿ  ಉತ್ತೀರ್ಣರಾಗಿದ್ದಾರೆ. 

ಶಾಲೆಗೆ ಪ್ರಥಮ ಭೂಮಿಕಾ.ಕೆ, ದ್ವಿತೀಯ ನಿಧಿ ಆರ್.ಜೆ, ವಿನಾಯಕ ಸಿ.ಕೆ, ತೃತೀಯ ಚಿನ್ಮಯಿ ಹಿರೇಮಠ, ನಾಲ್ಕನೇ ಸ್ಥಾನ ಬಸನಗೌಡ ಹಾಗೂ ಐದನೇ ಸ್ಥಾನ ಮಹಮ್ಮದ್ ಡಿ.ಹೆಚ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಸಿ.ಟಿ.ಸುರೇಶ್, ಉಪಾಧ್ಯಕ್ಷೆ ಶ್ರೀಮತಿ ಲಲಿತಾ ಸುರೇಶ್, ಕಾರ್ಯದರ್ಶಿ ಐ.ಕೆ.ಮಾಲತೇಶ್, ಖಜಾಂಚಿ ಎಸ್.ಕೆ.ನಾಗರಾಜ್, ಹರ್ಷ ವ್ಯಕ್ತಪಡಿಸಿದ್ದಾರೆ. 

error: Content is protected !!