ಮಲೇಬೆನ್ನೂರು, ಮೇ 20- ಜಿಗಳಿ ಗ್ರಾಮದಲ್ಲಿ ಗುರುವಾರ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಗ್ರಾಮದ ತೆಲಗಿ ಹಾಲಪ್ಪ (62) ಮತ್ತು ಬೇವಿನಹಳ್ಳಿ ರಾಮನಗೌಡ (64) ದಾವಣಗೆರೆಯ ಸಿಜಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಂಬಳಿ ಭೀಮಪ್ಪ (48) ಮನೆಯಲ್ಲೇ ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿ ದ್ದಾರೆ. ಯಲವಟ್ಟಿ ಗ್ರಾಮದಲ್ಲೂ 45 ವರ್ಷದ ಮಹಿಳೆಯೊಬ್ಬರು ಉಸಿರಾಟದ ತೊಂದರೆಯಿಂದ ದಾವಣಗೆರೆಯ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
February 24, 2025