ಸಶಸ್ತ್ರ ಪೊಲೀಸ್ ಹುದ್ದೆ : ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ದಾವಣಗೆರೆ, ಮಾ.13 – ಜಿಲ್ಲೆಯಲ್ಲಿ ಖಾಲಿಯಿರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿಯ ದ್ವಿತೀಯ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪ್ರಕಟಿಸಲಾಗಿದೆ

ಅಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ಬಂದು ಪರಿಶೀಲಿಸಬಹುದು.  ಅಲ್ಲದೆ ಕಚೇರಿಯ ವೆಬ್‍ಸೈಟ್‍ನ www.davangerepolice.karnataka.gov.in ಇತ್ತೀಚಿನ ಸುದ್ದಿಗಳು ಇಲ್ಲಿಯೂ ಸಹ ವೀಕ್ಷಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ ತಿಳಿಸಿದ್ದಾರೆ.

error: Content is protected !!