ಕೊರೊನಾ : ಭಯ ಬೇಡ, ಎಚ್ಚರಿಕೆ ಇರಲಿ

ದಾವಣಗೆರೆ, ಮೇ 19- ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಕೊರೊನಾ ಬಗ್ಗೆ ಜಾಗೃತಿ ಹಾಗೂ ಎಚ್ಚರಿಸುವಲ್ಲಿ  ದಾಪು ಗಾಲು  ಹಾಕುತ್ತಿದೆ. ಕೊರೊನಾ ಜಾಗೃತಿ ಜೊತೆಗೆ ಡೆಂಗ್ಯೂ, ಮಲೇರಿಯಾ ರೋಗಗಳ ಬಗ್ಗೆ ಮುಂಜಾಗ್ರತೆ ಮೂಡಿಸುವ ಕೆಲಸ ವಾಗಲಿ ಎಂದು ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಹೆಲ್ಪ್‌ಲೈನ್ ಸುಭಾನ್ ತಿಳಿಸಿದ್ದಾರೆ.

ಜನರು ಯಾವುದೇ ಕಾಯಿಲೆ ಬಂದರೂ ಆತ್ಮಸ್ಥೈರ್ಯ ಕಳೆದು ಕೊಳ್ಳುತ್ತಾ ಭಯಪಟ್ಟು ತಮ್ಮಷ್ಟಕ್ಕೆ ತಾವೇ ಉಸಿರುಗಟ್ಟುವ ವಾತಾ ವರಣ ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರಿಂದ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕಾರಣ ಅತಿಯಾದ ಭಯ. ಇದರಿಂದ ಹೊರ ಬರುವಂತೆ ಅವರು ಕರೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಭಾರೀ ಸಾವು-ನೋವುಗಳು ಸಂಭವಿಸುವ ಲಕ್ಷಣಗಳಿದ್ದು, ಸಾಂಕ್ರಾಮಿಕ ರೋಗದ ಬಗ್ಗೆ ಮಾಧ್ಯಮಗಳಲ್ಲಿ  ಹೆಚ್ಚು ಪ್ರಸಾರವಾಗದಂತೆ ಹಾಗೂ ಸಾವಿನ ಸಂಖ್ಯೆಯನ್ನು ಮತ್ತು ಕೊರೊನಾ ರೋಗಿಗಳ ಲೆಕ್ಕವನ್ನು ಬಹಿರಂಗ ಪಡಿಸುವುದನ್ನು ನಿಲ್ಲಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

error: Content is protected !!