ಹರಿಹರ, ಮಾ.14- ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 30, 31 ರಲ್ಲಿ ನಗರಸಭೆ ವತಿಯಿಂದ ತೆರಿಗೆ ವಸೂಲಾತಿ ಆಂದೋಲನ ಹಾಗೂ ಸಾರ್ವಜನಿಕರಿಂದ ಕುಂದು – ಕೊರತೆ ಸ್ವೀಕಾರ ಕಾರ್ಯಕ್ರಮವನ್ನು ಶಾಸಕ ಎಸ್. ರಾಮಪ್ಪ ಅಧ್ಯಕ್ಷತೆಯಲ್ಲಿ ವಿದ್ಯಾನಗರದ ಐರಣಿ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಸಕ ರಾಮಪ್ಪ ಮಾತನಾಡಿ, ನಗರಸಭೆ ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿ ಕರು ಸ್ಥಳದಲ್ಲೇ ತೆರಿಗೆ ಪಾವತಿಯನ್ನು ಪಡೆದು ಸಕಾಲ ದಲ್ಲಿ ಪಾವತಿಸಿ ರಿಯಾಯ್ತಿ ಸೌಲಭ್ಯವನ್ನು ಪಡೆಯುವ ಜೊತೆಗೆ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದರು.
ಇದೇ ವೇಳೆ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಲಾಯಿತು.
ಪೌರಾಯುಕ್ತ ಉದಯಕುಮಾರ್ ಬಿ. ತಳವಾರ, 30ನೇ ವಾರ್ಡಿನ ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಸ್. ಬಿರಾದಾರ್, ಕಂದಾಯ ಅಧಿಕಾರಿ ಜೆ.ವಿ. ಮಂಜುನಾಥ್, ಕಂದಾಯ ನಿರೀಕ್ಷಕರಾದ ಪಿ. ವಸಂತ್ ಹಾಗೂ ಕಿರಣ್ ಕುಮಾರ್, ಕರ ವಸೂಲಿಗಾರರಾದ ಅಣ್ಣಪ್ಪ, ನಾಗರಾಜ, ಲೆಕ್ಕಾಧೀಕ್ಷಕ ನಾಗರಾಜ ಬಲ್ಲಾಳ ಹಾಗು ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.