ಶಾಸಕ ಯತ್ನಾಳ್ ಹೇಳಿಕೆಗೆ ಬಣಜಿಗ ಸಮಾಜದ ಸ್ಪಷ್ಟನೆ

ದಾವಣಗೆರೆ, ಮಾ.14- ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮ ಸಮಾಜಕ್ಕೆ ಮೀಸಲಾತಿ ಕೇಳುವ ಬರದಲ್ಲಿ ಬಣಜಿಗ ಸಮಾಜದ ಬಗ್ಗೆ ವ್ಯಂಗ್ಯ ಮತ್ತು ದ್ವೇಷ ಕಾರುತ್ತಿದ್ದಾರೆ ಎಂದು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಆರೋಪಿಸಿದೆ.

ಬಸವನಗೌಡ ಯತ್ನಾಳ್ ಅವರಿಗೆ ನಮ್ಮ ಬಣಜಿಗ ಸಮಾಜದ ಕುರಿತು ತಪ್ಪು ತಿಳುವಳಿಕೆ ಇರುವಂತೆ ಕಾಣುತ್ತದೆ. ಯಾವುದೇ ಸಮಾಜ ಪಡೆಯುವ ಸರ್ಕಾರಿ ಸವಲತ್ತುಗಳಿಗೆ ಮತ್ತು ಮೀಸ ಲಾತಿಗೆ ನಮ್ಮ ಸಮಾಜ ಎಂದಿಗೂ ವಿರೋಧಿಸಿಲ್ಲ. ಅದರಂತೆ ಪಂಚಮ ಸಾಲಿ ಸಮಾಜ 2ಎ ಪಡೆಯಲು ನಡೆಸುತ್ತಿರುವ ಹೋರಾಟಕ್ಕೂ ಸಹ ನಮ್ಮ ಬೆಂಬಲವಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಆರ್. ಸಿದ್ದಲಿಂಗೇಶ್ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಆದರೆ, ಯತ್ನಾಳ್ ಅವರು ವಿನಾಕಾರಣ ನಮ್ಮ ಸಮಾಜದ ಕುರಿತು ದ್ವೇಷ ಕಾರುತ್ತಿದ್ದಾರೆ. ತಮ್ಮ ಸಮಾಜಕ್ಕೆ ಮೀಸಲಾತಿ ತಂದುಕೊಡುವ ಬರದಲ್ಲಿ ಬಣಜಿಗರಿಗೆ ವ್ಯಂಗ್ಯ ಮಾಡುತ್ತಿರು ವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಮ್ಮ ಸಮುದಾಯ ಪಂಚಮಸಾಲಿ ಸಮಾಜಕ್ಕೆ ಮಾಡಿರುವ ಅನ್ಯಾಯ ವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಬಣಜಿಗರಿಗೆ ಹಿಂದುಳಿದ ವರ್ಗದಲ್ಲಿ ಸ್ಥಾನ ಸಿಕ್ಕಿರುವುದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವಧಿಯ ಲ್ಲಲ್ಲ. ಹಿಂದುಳಿದ ಆಯೋಗದ ಅಧ್ಯಕ್ಷ ರಾಗಿದ್ದ ಲಕ್ಷ್ಮಣ್ ಜಿ. ಹಾವನೂರು ಅವರು 1976ರಲ್ಲಿ ನಮಗೆ ಹಿಂದುಳಿದ ವರ್ಗದಲ್ಲಿ ಸ್ಥಾನ ಕಲ್ಪಿಸಿಕೊಟ್ಟರು. ಆದರೆ, ನಮಗೆ ಮೀಸಲಾತಿ ಪ್ರಮಾಣ ಪತ್ರ ಸಿಗದ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದ ಕಾರಣ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪ್ರಮಾಣ ಪತ್ರ ನೀಡುವಂತೆ ಆದೇಶಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಬಣಜಿಗ ಸಮಾಜಕ್ಕೆ ಶಿಕ್ಷಣದಲ್ಲಿ ಮಾತ್ರ ಮೀಸಲಾತಿ ದೊರಕಿದ್ದು, ಯತ್ನಾಳ್ ಅವರ ಹೇಳಿಕೆಯಿಂದ ನಮ್ಮ ಸಮುದಾಯದ ಬಗ್ಗೆ ಅನುಮಾನದಿಂದ ನೋಡುವಂತಾ ಗಬಾರದು. ಲಿಂಗಾಯತ ಒಳಪಂಗಡ ಗಳು ಭ್ರಾತೃತ್ವ ಭಾವನೆಯಿಂದ ಇಲ್ಲಿಯವರೆಗೂ ನಡೆದುಕೊಂಡಿದ್ದು, ಅದಕ್ಕೆ ಯತ್ನಾಳ್ ಅವರ ಹೇಳಿಕೆ ಕಿಚ್ಚು ಹಚ್ಚಬಾರದು. ಮಾತುಗಳು ಇನ್ನೊಬ್ಬರ ಹೃದಯವನ್ನು ಅರಳಿಸಬೇಕೇ ಹೊರತು, ಕೆರಳಿಸುವಂತೆ ಇರಬಾರದು. ಅವರ ಘನತೆಗೆ ತಕ್ಕಂತೆ ಅವರು ಮಾತನಾಡ ಬೇಕಿದೆ ಎಂದು ಕೋರಿದ್ದಾರೆ.

error: Content is protected !!