ಪತ್ರಿಕಾ ವಿತರಕರಿಗೆ ಕೋವಿಡ್‌ ಲಸಿಕೆ, ಆರೋಗ್ಯ ವಿಮೆ ನೀಡಲು ಆಗ್ರಹ

ದಾವಣಗೆರೆ, ಮೇ 18- ಕೊರೊನಾ  ತಾಂಡವ ವಾಡುತ್ತಿರುವ ಹಿನ್ನೆಲೆಯಲ್ಲಿ ಆರಕ್ಷಕರು, ಡಾಕ್ಟರ್‌ಗಳು, ಆಶಾ ಕಾರ್ಯಕರ್ತರು, ಪತ್ರಕರ್ತರನ್ನು ಕೋವಿಡ್‌ ವಾರಿಯರ್ಸ್‌ ಎಂದು ರಾಜ್ಯ ಸರ್ಕಾರ ಗುರುತಿಸಿ, ಉಚಿತ ಲಸಿಕೆ ನೀಡುತ್ತಿದೆ. ಆದರೆ ದಿನ ಬೆಳ್ಳಂಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಮನೆ-ಮನೆಗೆ ಸುದ್ದಿ ಮುಟ್ಟಿಸುವ ಕಾರ್ಯದಲ್ಲಿ ತೊಡಗಿರುವ ಪತ್ರಿಕಾ ವಿತರಕರಿಗೆ ಯಾವುದೇ ರೀತಿಯ ಸೌಲಭ್ಯ ನೀಡದೆ ರಾಜ್ಯ ಸರ್ಕಾರ ವಂಚಿಸಿದೆ ಎಂದು ನಗರದ ಹಿರಿಯ ಪತ್ರಿಕಾ ವಿತರಕ ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ವಿತರಕರು ಸಹ ಕೊರೊನಾ ಯೋಧರ ರೀತಿಯಲ್ಲೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.  ಪತ್ರಿಕಾ ವಿತರಕರಿಗೂ ಸಹ ಉಚಿತ ಲಸಿಕೆ ಸಿಗುವಂತಾಗಬೇಕು. ವಾರಿಯರ್ಸ್‌ಗೆ ಸಿಗುವ ರೀತಿ ಯಲ್ಲೇ ಆರೋಗ್ಯ ವಿಮೆಯನ್ನು ಮಾಡಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪತ್ರಿಕೆಗಳನ್ನು ಪ್ರತಿನಿತ್ಯ ಗ್ರಾಹಕರ ಮನೆ-ಮನೆಗೆ ತಲುಪಿಸುತ್ತಾ, ಅದರಿಂದ ಬರುವ ಅಲ್ಪಮಟ್ಟದ ಕಮೀಷನ್‌ ಹಣದಿಂದ ತಮ್ಮ ಕುಟುಂಬದ ನಿರ್ವಹ ಣೆಯ ಆದಾಯದ ಒಂದು ಭಾಗವನ್ನಾಗಿರಿಸಿಕೊಂಡು ಜೀವನ ಸಾಗಿಸುತ್ತಿದ್ದ ವಿತರಕರಿಗೆ ಏನಾದರು ಆದರೆ ಕುಟುಂಬದ ನಿರ್ವಹಣೆ ಮಾಡುವ ಆಧಾರಸ್ತಂಭವೇ ಇಲ್ಲದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

2018 ರಲ್ಲಿ ಸರ್ಕಾರವು ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ 2 ಕೋಟಿ ಅನುದಾನ ಮಂಡಿಸಿತ್ತು. ಆದರೆ, ಅದು ಬಜೆಟ್‌ನಲ್ಲೇ ಉಳಿಯಿತೇ ಹೊರತು ಜಾರಿಗೆ ಬರಲಿಲ್ಲ. ಪತ್ರಿಕಾ ವಿತರಕರು  ಹಲವು ಬಾರಿ ರಾಜ್ಯ ಸರ್ಕಾರಕ್ಕೆ  ಪತ್ರಿಕಾ ವಿತರಕ ರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸು ವಂತೆ, ವಿಮಾ ಸೌಲಭ್ಯ (ನಿವೃತ್ತಿ ವೇತನ) ನೀಡು ವಂತೆ ಮನವಿ ಮಾಡಿದರೂ   ಪ್ರಯೋಜನವಾಗಿಲ್ಲ ಎಂದು  ಕೃಷ್ಣಮೂರ್ತಿ ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.

error: Content is protected !!