ಚಿರಂತನದಿಂದ `ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿ ಪ್ರದಾನ’ ಸಮಾರಂಭ

ದಾವಣಗೆರೆ, ಮಾ. 12- ಚಿರಂತನ ಅಕಾಡೆಮಿಯಿಂದ ಇದೇ 14ರ ಭಾನುವಾರ ಸಂಜೆ 6 ಗಂಟೆಗೆ ನಗರದ ಶಿವಯೋಗಿ ಮಂದಿರದ ಆವರಣದಲ್ಲಿ `ಕರ್ನಾಟಕ ಮಹಿಳಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ’ ಹಮ್ಮಿಕೊಂಡಿರುವುದಾಗಿ ಸಂಸ್ಥಾಪಕ ಅಧ್ಯಕ್ಷೆ ಎನ್.ದೀಪಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಾವಣಗೆರೆಯಲ್ಲಿ ಕಳೆದ 19 ವರ್ಷಗಳಿಂದ ಸಕ್ರಿಯವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ `ಚಿರಂತನ’ ಈ ಬಾರಿ ವಿಶೇಷವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ವಿದ್ಯಾಕ್ಷೇತ್ರ, ಸ್ವ ಉದ್ಯೋಗ, ಸಂಗೀತ, ನೃತ್ಯ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿ ಯಶಸ್ವಿಯಾಗಿರುವ ರಾಜ್ಯದ 25 ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 138 ಮಹಿಳೆಯರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 25 ಜನರನ್ನು ಆಯ್ಕೆ ಮಾಡಿರುವುದಾಗಿ ದೀಪಾ ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಹಿಸಲಿದ್ದು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಉಪ ಕುಲಪತಿ ಪ್ರೊ.ಬಿ.ಕೆ. ತುಳಸಿ ಮಾಲಾ, ಮೈಸೂರು ವಿವಿ ಪ್ರದರ್ಶಕ ಕಲೆಗಳ ವಿಭಾಗದ ಸಹಾಯಕ ಡೀನ್ ಡಾ.ಶೀಲಾ ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ದುಬೈ ಕನ್ನಡಿಗರ ಸಂಘದ ಅಧ್ಯಕ್ಷೆ ಉಮಾ ವಿದ್ಯಾಧರ್ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಲಕಾನಂದ, ರತನ್, ಪೂಜಾ ವೆಂಕಟೇಶ್ ಉಪಸ್ಥಿತರಿದ್ದರು.

ಪ್ರಶಸ್ತಿಗೆ ಆಯ್ಕೆಯಾದವರು: 

ಸ್ಟಾನಿಯಾ ಡೆಬೋರಾ ಪೆರಿಸ್ (ಕ್ರೀಡೆ), ಅನಿತಾ ಹೆಚ್.ಎಸ್. (ಶಿಕ್ಷಣ), ಮೃದುಲ ಶ್ರೀಧರ್ (ಶಿಕ್ಷಣ ಮತ್ತು ಉದ್ಯಮಿ), ಶೋಭ ಯದುರಾಜ್ (ಕಾನೂನು ಮತ್ತು ಉದ್ಯಮಿ), ಹೇಮಾ ನಿರಂಜನ್ (ಉದ್ಯಮ), ಡಾ.ಶ್ರೀ ವಿದ್ಯಾ ನಾಗರಾಜ್ (ಆರೋಗ್ಯ ಸೇವೆ), ಡಾ.ಶಶಿಕಲಾ ಕೃಷ್ಣಮೂರ್ತಿ (ಆರೋಗ್ಯ ಸೇವೆ) ರಶ್ಮಿ ಎಸ್. (ಪತ್ರಿಕೋದ್ಯಮ) ಪುಷ್ಪ ಎಂ.ಎಂ. (ಸಮಾಜ ಸೇವೆ), ಅರುಣ ಹೆಚ್. (ಸಮಾಜ ಸೇವೆ), ರೂಪ ಜಿ.ಎಂ. (ಸಮಾಜ ಸೇವೆ),  ಸುವರ್ಣ ಸತೀಶ್ (ಸಮಾಜ ಸೇವೆ), ಲತಿಕ ಡಿ.ಶೆಟ್ಟಿ (ಸಮಾಜ ಸೇವೆ ಮತ್ತು ತರಬೇತಿ), ಭಾಗೀರಥಿ ಕನ್ನಡತಿ (ಯೋಗ), ಉಮಾ ವಿದ್ಯಾಧರ್ (ಕನ್ನಡ ಸೇವೆ), ಡಾ.ಶೈಲಜಾ ಪಂತುಲು (ಸಂಗೀತ), ಶ್ರೀಮತಿ ನಂದಿನಿ ಶಿವಪ್ರಕಾಶ್ (ನೃತ್ಯ), ದೀಪಾ ಭಟ್ (ನೃತ್ಯ), ರೋಹಿಣಿ ಇಮಾರತಿ (ನೃತ್ಯ), ನಿರ್ಮಲ ಜಗದೀಶ್ (ನೃತ್ಯ), ಪೂರ್ಣಿಮಾ ಎಂ.ಎಸ್ (ಚಿತ್ರಕಲೆ).

error: Content is protected !!