ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒತ್ತಡ ನಿರ್ವಹಣೆ ಕುರಿತು ನಡೆದ ಉಪನ್ಯಾಸದಲ್ಲಿ ಗೋವಿಂದಪ್ಪ
ದಾವಣಗೆರೆ, ಮಾ. 11 – ಭಯ ಮತ್ತು ಆಸೆಯ ಒತ್ತಡದಿಂದ ಓದದೆ ಪ್ರೀತಿಯಿಂದ ಓದಿದರೆ ಜ್ಞಾನ ವೃದ್ಧಿಯಾಗಿ ಬಹುದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ದಾವಣಗೆರೆ ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಗೋವಿಂದಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ವಿಷಯ ಕುರಿತು ನಿನ್ನೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂಶೋಧನೆಗಳ ಪ್ರಕಾರ ಒತ್ತಡಕ್ಕೆ ನಮ್ಮ ಸುತ್ತಮುತ್ತಲ ಪರಿಸರ ನಾವು ಇರುವ ಅಥವಾ ಕೆಲಸ ಮಾಡುವ ಸಂಸ್ಥೆ ಅಥವಾ ಮನೆ ಹಾಗೂ ನಮ್ಮ ವೈಯಕ್ತಿಕ ಕಾರಣಗಳು ಕಾರಣವಾಗುತ್ತವೆ ಎಂದು ಹೇಳಿದರು.
ಒತ್ತಡ ನಿರ್ವಹಣೆ ಮಾಡಲು ಪ್ರತಿನಿತ್ಯ ದೈಹಿಕ ವ್ಯಾಯಾಮ, ಶಾಂತ ಸ್ವಭಾವ ಹಾಗೂ ಧ್ಯಾನ ಮಾಡುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಂಶುಪಾಲ ಪ್ರೊ.ಟಿ.ವೀರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೊ. ಶಂಕರ್ ಆರ್. ಶೀಲಿ, ಪ್ರೊ ಮಂಜಣ್ಣ, ಪ್ರೊ. ದಾದಾಪೀರ್ ನವಿಲೇಹಾಳ್, ಪ್ರೊ. ಜಯಣ್ಣ, ಮರುಳಸಿದ್ದಪ್ಪ, ನಾಗರಾಜ, ಚನ್ನಬಸಪ್ಪ, ಶಂಭುಲಿಂಗಪ್ಪ, ಶಿವಕುಮಾರ್ ಕಂಪ್ಲಿ, ಗುರುಮೂರ್ತಿ, ಕೆ. ಶ್ಯಾಮಲ, ಆರ್. ಯಶೋಧ, ಪ್ರೊ. ಗೋವಿಂದಪ್ಪ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಪ್ರಾರ್ಥಿಸಿದರು. ನಿರ್ವಹಣಾ ಶಾಸ್ತ್ರದ ಪ್ರಾಧ್ಯಾಪಕಿ ಅಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಮಂಜುನಾಥ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವೆಂಕಟೇಶ್ ಬಾಬು ವಂದಿಸಿದರು.