ಕೂಡ್ಲಿಗಿ, ಜು.28- ಇಡೀ ವಿಶ್ವದಲ್ಲಿ ಹೆಚ್ಚು ಜನ ಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಅಭಿವೃದ್ಧಿ ಹಾಗೂ ಎಲ್ಲಾ ರಂಗದ ಹಿನ್ನೆಡೆಗೆ ಜನಸಂಖ್ಯೆ ಸ್ಪೋಟವೇ ಕಾರಣವಾಗಿದ್ದು, ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಕರ್ನಾಟಕ ಸೇರಿದಂತೆ ದೇಶವ್ಯಾಪಿ ಕಾಯ್ದೆ ಜಾರಿಗೆ ತರಬೇಕು ಎಂದು ಶ್ರೀ ರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾ ರಕ್ಕೆ ಮನವಿ ಮಾಡಿದರು.
ಪಟ್ಟಣದ ಕಾವಲ್ಲಿ ರಾಘವೇಂದ್ರ ಅವರ ನಿವಾಸದಲ್ಲಿ ಶನಿವಾರ ರಾತ್ರಿ ನಡೆದ ಭೋಜನ ಕೂಟದಲ್ಲಿ ಭಾಗವಹಿಸಿದ ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತ ರೊಂದಿಗೆ ಅವರು ಮಾತನಾಡಿದರು.
ಜನಸಂಖ್ಯೆ ನಿಯಂತ್ರಣದಿಂದ ದೇಶವು ಪ್ರತಿ ಹಂತದಲ್ಲೂ ಮುನ್ನಡೆಯಲು ಸಾಧ್ಯ. ತಪ್ಪದೇ ದೇಶವ್ಯಾಪಿ ಈ ಕಾಯಿದೆ ಜಾರಿಗೆ ತರಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾವಲ್ಲಿ ರಾಘವೇಂದ್ರ, ಶ್ರೀ ರಾಮಸೇನೆಯ ರಾಷ್ಟ್ರೀಯ ಕಾರ್ಯ ದರ್ಶಿ ಗಂಗಾಧರ್ ಕುಲಕರ್ಣಿ, ಜಿಲ್ಲಾಧ್ಯಕ್ಷ ಸಂಜೀವ ಮರಡಿ, ಕೂಡ್ಲಿಗಿ ತಾಲ್ಲೂಕಾಧ್ಯಕ್ಷ ದುರುಗೇಶ್, ವಿವೇಕಾ ನಂದ, ಶ್ರೀ ರಾಮಸೇನೆ ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.