ದಾವಣಗೆರೆ, ಮೇ 17- ಕಳೆದ ವಾರ ಸುರಿದ ಮಳೆಯಿಂದಾಗಿ ಬಿಎಸ್ಸೆನ್ನೆಲ್ ನೆಟ್‍ವರ್ಕ್‍ನ ಭೂಗತ ಕೇಬಲ್ ತುಂಡರಿಸಿದ್ದು, ಕಳೆದ ನಾಲ್ಕೈದು ದಿನಗಳಿಂದ ಸರಿಪಡಿಸುವ ಕಾರ್ಯ ಮುಂದುವರೆದಿದೆ. ನಗರದ ಜಯದೇವ ವೃತ್ತ ಸಮೀಪ ಮ್ಯಾನ್‍ಹೋಲ್‍ಗೆ ಇಳಿದಿರುವ ಸಿಬ್ಬಂದಿಯು ಗಾಳಿಯಾಡದ ಪ್ರತಿಕೂಲ ವಾತಾವರಣದಲ್ಲಿ ಸಮಸ್ಯೆ ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ. ಕೇಬಲ್ ತುಂಡಾಗಿರುವುದರಿಂದ ನಿಟುವಳ್ಳಿ, ಕೆಟಿಜೆ ನಗರ, ಸರಸ್ವತಿ ನಗರ, ಜಯನಗರ ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ಬಿಎಸ್‍ಎನ್‍ಎಲ್ ಸ್ಥಿರ ದೂರವಾಣಿ ಮತ್ತು ಬ್ರಾಂಡ್‍ಬ್ಯಾಂಡ್ ಬಳಕೆದಾರರಿಗೆ ಸಂಪರ್ಕ ಕಡಿತಗೊಂಡು ತೊಂದರೆ ಉಂಟಾಯಿತು.
December 25, 2024