ಕೊರೊನಾ : ಜಿಲ್ಲೆಯಲ್ಲಿ 747 ಪಾಸಿಟಿವ್, 3 ಸಾವು

ದಾವಣಗೆರೆ, ಮೇ 17- ಜಿಲ್ಲೆಯಲ್ಲಿ ಸೋಮವಾರ 747 ಜನರಲ್ಲಿ ಕೊರೊನಾ ಸೋಂಕು ಇರುವ ಬಗ್ಗೆ ವರದಿಯಾಗಿದ್ದು, ಸಕ್ರಿಯ ಪ್ರಕರಣ ಗಳ ಸಂಖ್ಯೆ 4044ಕ್ಕೆ ಏರಿಕೆಯಾಗಿದೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸಿ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೂರಿನ 30 ವರ್ಷದ ಮಹಿಳೆ, ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಸ್ವತಿ ನಗರದ 69 ವರ್ಷದ ಪುರುಷ ಹಾಗೂ ಎಲೆಬೇತೂರು ಗ್ರಾಮದ 80 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 316, ಹರಿಹರ 65, ಜಗಳೂರು 77, ಚನ್ನಗಿರಿ 146, ಹೊನ್ನಾಳಿ 114 ಹಾಗೂ ಹೊರ ಜಿಲ್ಲೆಯ 29 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 356 ಜನರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

error: Content is protected !!