ದಾವಣಗೆರೆ, ಜು.28- ಛಲವಾದಿ ಸಮುದಾಯವನ್ನು ಪ್ರತಿನಿಧಿಸುವ, ಹಾವೇರಿ ಶಾಸಕ ನೆಹರು ಓಲೇಕಾರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಛಲವಾದಿ ಮಹಾಸಭಾ ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದೆ.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಎಸ್.ಶೇಖರಪ್ಪ ಅವರು, ನಮ್ಮ ಸಮುದಾಯದಿಂದ ನೆಹರು ಓಲೇಕಾರ್ (ಹಾವೇರಿ), ಎಂ.ಪಿ.ಕುಮಾರಸ್ವಾಮಿ (ಮೂಡಿಗೆರೆ), ಹರ್ಷವರ್ಧನ (ನಂಜನಗೂಡು) ಆಯ್ಕೆಯಾಗಿದ್ದಾರೆ. ಇವರಲ್ಲಿ ಜೇಷ್ಠತೆ ಆಧಾರದ ಮೇಲೆ ನೆಹರು ಓಲೇಕಾರ್ ಅವರಿಗೆ ಸಚಿವ ಸ್ಥಾನ ಕೊಡುವುದು ಸೂಕ್ತ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ಪದಾಧಿಕಾರಿಗಳಾದ ಸಿ. ಜಯ್ಯಪ್ಪ, ಹೆಚ್. ಶಿವಪ್ಪ, ರಾಮಣ್ಣ, ನವೀನ್ ಕುಮಾರ್, ಹಾಲೇಶ್, ಪಕ್ಕೀರಪ್ಪ, ಕಕ್ಕರಗೊಳ್ಳದ ಹನುಮಂತಪ್ಪ, ಮಧುಸೂದನ್, ಹೆಚ್.ಕೆ. ಚನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.